Spread the love

ಡಮಾಸ್ಕಸ್: 24 ಗಂಟೆಯಲ್ಲಿ ತ್ರಿವಳಿ ಪ್ರಬಲ ಭೂಕಂಪನದಿಂದಾಗಿ ಛಿದ್ರವಾಗಿರುವ ಸಿರಿಯಾ, ಟಿರ್ಕಿಯಲ್ಲಿ ಸಾವು ರಣಕೇಕೆ ಹಾಕಿದೆ.

ಕಂಪನಕ್ಕೆ ಮಧ್ಯಪ್ರಾಚ್ಯ ರಾಷ್ಟ್ರಗಳ 3500 ಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಸಾವಿರಾರು ಕಟ್ಟಡಗಳು ಧರಾಶಾಯಿಯಾಗಿವೆ. ಅವಶೇಷಗಳಡಿ ಜನರು ಸಿಲುಕಿದ್ದು, ಸಾವಿನ ಸಂಖ್ಯೆ 10 ಸಾವಿರ ತಲುಪುವ ಸಾಧ್ಯತೆ ಇದೆ.ಅವಶೇಷಗಳಡಿ ಸಿಕ್ಕಿಬಿದ್ದವರ ರಕ್ಷಣಾ ಕಾರ್ಯಾಚರಣೆ

ಭೂಕಂಪನದಿಂದಾಗಿ ಟರ್ಕಿಯೊಂದರಲ್ಲೇ 2370 ಜನರು ಸಾವನ್ನಪ್ಪಿದ್ದರೆ, ಸಿರಿಯಾದಲ್ಲಿ ಕನಿಷ್ಠ 1400 ಮಂದಿ ಸಮಾಧಿಯಾಗಿದ್ದಾರೆ. ಇಂಧನ ಪೈಪ್‌ಲೈನ್‌ಗಳು ಮತ್ತು ತೈಲ ಸಂಸ್ಕರಣಾಗಾರಗಳಲ್ಲಿ ಬೆಂಕಿ ಹೊತ್ತಿಕೊಂಡು ವ್ಯಾಪಕ ಹಾನಿ ಸಂಭವಿಸಿದೆ. ಸೋಮವಾರ ಮುಂಜಾನೆ ಉಭಯ ದೇಶಗಳ ಗಡಿ ಪ್ರದೇಶದಲ್ಲಿ 7.8 ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದೆ.


Spread the love

By admin