Spread the love

ಅಮೆರಿಕ: ಟೆಸ್ಲಾ ನಿಧಿ ಭದ್ರತಾ ಪ್ರಕರಣದಲ್ಲಿ ಜಗತ್ತಿನ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾದ ಎಲೋನ್ ಮಸ್ಕ್ ಅವರನ್ನು ಅಮೆರಿಕದ ನ್ಯಾಯಾಲಯ ಖುಲಾಸೆಗೊಳಿಸಿ ಆದೇಶಿಸಿದೆ.

ಟೆಸ್ಲಾ ಸಿಇಒ ಕೂಡ ಆಗಿರುವ ಎಲೋನ್ ಮಸ್ಕ್ 2018ರಲ್ಲಿ ಕಂಪನಿಯನ್ನು ಖಾಸಗಿಯಾಗಿ ತೆಗೆದುಕೊಳ್ಳಲು ಯೋಚಿಸುತ್ತಿರುವುದಾಗಿ ಮಾಡಿದ್ದ ಟ್ವೀಟ್ ಕಾನೂನು ಸಮರಕ್ಕೆ ಕಾರಣವಾಗಿತ್ತು. ಇದೀಗ ಹೂಡಿಕೆದಾರರಿಂದ ಉಂಟಾದ ನಷ್ಟಕ್ಕೆ ಎಲೋನ್ ಮಸ್ಕ್ ಜವಾಬ್ದಾರರಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿದೆ.

ಟೆಸ್ಲಾ ಅಧ್ಯಕ್ಷ ಸ್ಥಾನಕ್ಕೆ ಕುತ್ತು ತಂದಿದ್ದ ಟ್ವೀಟ್​: 2018ರ ಆಗಸ್ಟ್​ನಲ್ಲಿ ಎಲೋನ್ ಮಸ್ಕ್ ಟ್ವೀಟ್​ವೊಂದು ಮಾಡಿ, ಟೆಸ್ಲಾವನ್ನು ಖಾಸಗಿಯಾಗಿ 420 ಡಾಲರ್​ಗೆ ತೆಗೆದುಕೊಳ್ಳಲು ಪರಿಗಣಿಸುತ್ತಿದ್ದೇನೆ. ಹಣ ಸುರಕ್ಷಿತವಾಗಿದೆ. ಷೇರುದಾರರು 420 ಡಾಲರ್​ಗೆ ಮಾರಾಟ ಮಾಡಬಹುದು ಅಥವಾ ಷೇರುಗಳನ್ನು ಹಿಡಿದಿಟ್ಟುಕೊಳ್ಳಬಹುದು ಅಥವಾ ಖಾಸಗಿಯಾಗಬಹುದು ಎಂದು ಹೇಳಿದ್ದರು. ಈ ಟ್ವೀಟ್​ನಿಂದಾಗಿ ಎಲೋನ್ ಮಸ್ಕ್ ತಮ್ಮ ಟೆಸ್ಲಾ ಅಧ್ಯಕ್ಷ ಸ್ಥಾನಕ್ಕೆ ಕುತ್ತು ತಂದುಕೊಂಡಿದ್ದರು.

ಮತ್ತೊಂದೆಡೆ, ಈ ಟ್ವೀಟ್‌ನ ನಂತರ ಹೂಡಿಕೆದಾರರು ಮಸ್ಕ್, ಟೆಸ್ಲಾ ಮತ್ತು ಕಂಪನಿಯ ಮಂಡಳಿಯ ಮೇಲೆ ಮೊಕದ್ದಮೆ ಹೂಡಿದ್ದರು. ಎಲೆಕ್ಟ್ರಿಕ್ ಕಾರು ಕಂಪನಿಯನ್ನು ಖಾಸಗಿಯಾಗಿ ತೆಗೆದುಕೊಳ್ಳುವ ಯೋಜನೆಗೆ ಸಂಬಂಧಿಸಿದಂತೆ ಹೇಳಿಕೆಯು ತಮ್ಮ ಕೆಟ್ಟ ಆರ್ಥಿಕ ಪರಿಣಾಮಗಳನ್ನು ಉಂಟುಮಾಡಿದೆ ಎಂದು ಹೂಡಿಕೆದಾರರು ಹೇಳಿದ್ದರು. ಇದೇ ವೇಳೆ, ಟ್ವೀಟ್​ನಿಂದ ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಕಮಿಷನ್‌ ಕೂಡ ಸಿವಿಲ್​ ಮೊಕದ್ದಮೆ ಹೂಡುವಂತೆ ಮಾಡಿದ್ದರು.


Spread the love

By admin