Spread the love

ವದೆಹಲಿ: ಹೆಚ್.ಡಿ. ಕುಮಾರಸ್ವಾಮಿ ಎರಡು ಬಾರಿ ಆಕಸ್ಮಿಕವಾಗಿ ಮುಖ್ಯಮಂತ್ರಿಯಾಗಿದ್ದವರು ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ತಿಳಿಸಿದ್ದಾರೆ.

ದೆಹಲಿಯಲ್ಲಿ ಮಾತನಾಡಿದ ರೇಣುಕಾಚಾರ್ಯ, ಕುಮಾರಸ್ವಾಮಿಯವರು ಎರಡು ಬಾರಿ ಆಕಸ್ಮಿಕವಾಗಿ ಸಿಎಂ ಆಗಿ ಅಧಿಕಾರ ಅನುಭವಿಸಿದ್ದಾರೆ.

ಈಗ ಜೆಡಿಎಸ್ ಕಥೆ ಮುಗಿಯುತ್ತಿದೆ. ಹಾಗಾಗಿ ಹತಾಶರಾಗಿ ಏನೇನೋ ಮಾತನಾಡುತ್ತಿದ್ದಾರೆ ಎಂದರು.

ಕೆಲವೇ ದಿನಗಳಲ್ಲಿ ಜೆಡಿಎಸ್ ಎರಡು ಭಾಗವಾಗಲಿದೆ. ಕುಮಾರಸ್ವಾಮಿ ಬಣ, ಭವಾನಿ ರೇವಣ್ಣ ಬಣ ಎಂದು ಎರಡು ಭಾಗವಾಗಲಿದೆ. ಜೆಡಿಎಸ್ ಈಗ ಕುಮಾರಸ್ವಾಮಿ ನಿಯಂತ್ರಣದಲ್ಲಿಲ್ಲ ಎಂದು ಹೇಳಿದ್ದಾರೆ.


Spread the love

By admin