Spread the love

ರಾಮನಗರ: ರಮೇಶ್ ಜಾರಕಿಹೊಳಿ ಸಿಡಿ ಕೇಸ್ ನ್ನು ಸಿಬಿಐಗೆ ಕೊಡುತ್ತೇವೆ ಎಂದು ಹೇಳುತ್ತಿದ್ದಂತೆಯೇ ಡಿ.ಕೆ.ಶಿವಕುಮಾರ್ ಗೆ ಗಢ ಗಢ ನಡುಕ ಶುರುವಾಯಿತು ಎಂದು ಸಚಿವ ಅಶ್ವತ್ಥನಾರಾಯಣ ಲೇವಡಿ ಮಾಡಿದ್ದಾರೆ.

ರಾಜ್ಯದಲ್ಲಿ ಸಿಡಿ ಪರಿಣಿತ ಎಂದರೆ ಡಿ.ಕೆ.ಶಿವಕುಮಾರ್, ಸಿಬಿಐ ತನಿಖೆ ಅಂದಕೂಡಲೇ ಅವರಿಗೆ ನಡುಕ ಶುರುವಾಗಿದೆ.

ಸಿಡಿ ಇಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಡಿ.ಕೆ.ಶಿಯಂತಹ ಕೀಳು ಮಟ್ಟದ ರಾಜಕಾರಣಿ ಬೇರೊಬ್ಬರಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ

ಜೆಡಿಎಸ್ ಟ್ವೀಟ್ ವಿಚಾರವಾಗಿ ಮಾತನಾಡಿದ ಅಶ್ವತ್ಥನಾರಾಯಣ, ಅಧಿಕಾರಕೊಟ್ಟಾಗ ಅದನ್ನು ಬಳಸಿಕೊಳ್ಳದೇ ಹೋಟೆಲ್ ನಿಂದ ಆಡಳಿತ ನಡೆಸಿದ್ದು ಯಾರು ಎಂದು ಗೊತ್ತಿದೆ. ನಮ್ಮ ಜೊತೆ ಇದ್ದಾಗ, ಕಾಂಗ್ರೆಸ್ ಜೊತೆ ಇದ್ದಾಗ ಸರ್ಕಾರ ಮಾಡಲು ಆಗಲ್ಲ ಎಂದು ಕೈಚಲ್ಲಿದರು. ಅವರ ಹೇಳಿಕೆ ಅವರಿಗೆ ಅನ್ವಯವಾಗಲಿದೆ. ಜೆಡಿಎಸ್ ನ ಪಂಚರತ್ನ ಯಾತ್ರೆ ಪಂಕ್ಚರ್ ರತ್ನ ಯಾತ್ರೆ ಆಗಿದೆ ಎಂದು ಟಾಂಗ್ ನೀಡಿದರು.


Spread the love

By admin