Spread the love

ಪಠಾಣ್ʼ ಸಿನಿಮಾ ರಿಲೀಸ್ ಗೂ ಮುನ್ನವೇ ದೊಡ್ಡ ಮಟ್ಟದ ವಿರೋಧ ವ್ಯಕ್ತವಾಗಿತ್ತು. ಸಿನಿಮಾವನ್ನು ಬ್ಯಾನ್ ಮಾಡಬೇಕು ಅಂತ ಪ್ರತಿಭಟನೆ ಕಾವು ಜೋರಾಗಿತ್ತು‌. ಆದರೂ ಸಿನಿಮಾ ರಿಲೀಸ್ ಆಯ್ತು. ದೊಡ್ಡದಾದ ಹಿಟ್ ಈ ಸಿನಿಮಾ ಕೊಟ್ಟಿದೆ. ನೂರಾರು ಕೋಟಿ ಕಲೆಕ್ಷನ್ ಮಾಡಿದೆ ಈ ಸಿನಿಮಾ.

ಸಿನಿಮಾ ಬ್ಯಾನ್ ಅಂದವರ ಕುರಿತು ಪ್ರಕಾಶ್ ರೈ ತಿರುಗೇಟು ನೀಡಿದ್ದಾರೆ.

ಕೇರಳದ ತಿರುವನಂತಪುರಂನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಪ್ರಕಾಶ್ ರಾಜ್​, ಕೆಲವರು ಪಠಾಣ್ ಚಿತ್ರವನ್ನು ಬ್ಯಾನ್ ಮಾಡಬೇಕು ಎಂದರು. ಬಾಯ್ಕಾಟ್ ಮಾಡಬೇಕು ಅಂದುಕೊಂಡಿದ್ದರು. ಆದರೆ, ಈ ಚಿತ್ರ ನೂರಾರು ಕೋಟಿ ಬಾಚಿಕೊಂಡಿದೆ. 700 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಬ್ಯಾನ್ ಮಾಡಬೇಕು ಅಂದವರು ಮೂರ್ಖರು, ಮತಾಂಧರು. ಪಠಾಣ್​ನ ಬ್ಯಾನ್ ಮಾಡಲು ಇವರೆಲ್ಲ ಬಯಸಿದ್ದರು. ಅವರಿಗೆ ಮೋದಿ ಸಿನಿಮಾಗೆ 30 ಕೋಟಿ ರೂಪಾಯಿ ಕಲೆಕ್ಷನ್ ಮಾಡಿಸಲು ಸಾಧ್ಯವಾಗಿಲ್ಲ. ಮತಾಂಧರು ಬೊಗಳುತ್ತಾರೆ, ಕಚ್ಚುವುದಿಲ್ಲ ಎಂದು ಖಾರವಾಗಿ ಹೇಳಿದ್ದಾರೆ.

ಇನ್ನು ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ʼದಿ ಕಾಶ್ಮೀರ್ ಫೈಲ್ಸ್ʼ ಚಿತ್ರದ ಬಗ್ಗೆಯೂ ಮಾತನಾಡಿರುವ ಪ್ರಕಾಶ್ ರಾಜ್, ಕಾಶ್ಮೀರ್ ಫೈಲ್ಸ್​ ನಾನ್ಸೆನ್ಸ್ ಸಿನಿಮಾವಾಗಿದೆ. ಅದನ್ನು ನಿರ್ಮಾಣ ಮಾಡಿದ್ದು ಯಾರು ಅನ್ನೋದು ನಿಮಗೆ ಗೊತ್ತೇ ಇದೆ. ಅಂತಾರಾಷ್ಟ್ರಿಯ ಮಟ್ಟದಲ್ಲೂ ಈ‌ ಸಿನಿಮಾಗೆ ನೆಗಟಿವ್ ಒಪಿನಿಯನ್ ಬಂದಿದೆ. ಅಂತರಾಷ್ಟ್ರೀಯ ಜ್ಯೂರಿಗಳು ಈ ಚಿತ್ರವನ್ನು ತೆಗಳಿದ್ದಾರೆ. ಈ ಚಿತ್ರದ ನಿರ್ದೇಶಕ ನಮ್ಮ ಚಿತ್ರಕ್ಕೆ ಏಕೆ ಆಸ್ಕರ್ ಸಿಗುತ್ತಿಲ್ಲ ಎಂದು ಕೇಳುತ್ತಿದ್ದಾರೆ. ಇಲ್ಲಿ ನೀವು ಪ್ರೊಪೊಗಾಂಡ ಚಿತ್ರಗಳನ್ನು ಮಾಡಬಹುದು. ಈ ರೀತಿಯ ಸಿನಿಮಾಗಳನ್ನು ನಿರ್ಮಾಣ ಮಾಡಲು ಅವರು 2 ಸಾವಿರ ಕೋಟಿ ಹೂಡಿಕೆ ಮಾಡಿದ್ದಾರೆ. ಆದರೆ, ಎಲ್ಲಾ ಬಾರಿಯೂ ಜನರನ್ನು ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಟೀಕಿಸಿದ್ದಾರೆ.


Spread the love

By admin