ಹಾಸನ: ದುಡ್ಡು ಕೊಟ್ರೆ ಅರಸೀಕೆರೆ ಜನರು ಓಟು ಹಾಕೋದು, ದೇವೇಗೌಡ ಕುಮಾರಸ್ವಾಮಿ ಮುಖ ನೋಡಿ ಓಟು ಹಾಕಲ್ಲ ಶಾಸಕ ಶಿವಲಿಂಗೇಗೌಡ ಹೇಳಿಕೆ ಕುರಿತು ಮಾಜಿ ಸಚಿವ ರೇವಣ್ಣ ಅಸಮಾಧಾನ, ಜನ ತಿರುಗಿ ಬಿದ್ದರೆ ಏನೂ ಮಾಡೋಕೆ ಆಗಲ್ಲ, ಈ ಬಾರಿ ರಾಜ್ಯದಲ್ಲಿ 123 ಸ್ಥಾನ ಗೆದ್ದು ವಿಧಾನಸಭೆ ಏರುತ್ತೇವೆ ನೋಡ್ತಾ ಇರಿ ಎಂದು ರೇವಣ್ಣ ಆತ್ಮವಿಶ್ವಾಸ ವ್ಯಕ್ತಪಡಿಸಿದ್ರು.
ಜನ ತಿರುಗಿ ಬಿದ್ದರೆ ಯಾರೂ ಏನು ಮಾಡೊಕೆ ಆಗಲ್ಲ ಅರಸೀಕೆರೆ ಜನ ದುಡ್ಡು ಕೊಟ್ರೆ ಮಾತ್ರ ಓಟು ಹಾಕೋದು ದೇವೇಗೌಡರ, ಕುಮಾರಸ್ವಾಮಿ ಅವರ ಮುಖ ನೋಡಿ ಅಲ್ಲ ಎನ್ನುತ್ತಾರೆ ಶಿವಲಿಂಗೇಗೌಡರು ಈ ಬಾರಿ ಚುನಾವಣೆಯಲ್ಲಿ ಜನರು ಅದನ್ನ ಗೊತ್ತು ಮಾಡುತ್ತಾರೆ, ಕಾಂಗ್ರೆಸ್ ಅನ್ನು ಗುಜರಿ ಬಸ್ ಎಂದು ವ್ಯಂಗ್ಯವಾಡಿದ ಅವರು ದೇಶದುದ್ದಕ್ಕೂ ಇದ್ದ ಕಾಂಗ್ರೆಸ್ ಬಸ್ ಈಗ ಕಾಶ್ಮೀರದಲ್ಲೆ ಕೆಟ್ಟು ನಿಂತು ವಿಲವಿಲ ಎನ್ನುತ್ತಿದೆ, ಮೋದಿ ಅವರು ಹೇಳಿದ ಹಾಗೆ 15 ವರ್ಷದ ಹಳೇ ವಾಹನ ಗುಜರಿಗೆ ಹಾಕಬೇಕು ಎಂದು ಮಾರ್ಮಿಕವಾಗಿ ನುಡಿದ ರೇವಣ್ಣ. ಶಿವಲಿಂಗೇಗೌಡರ ಸೋಲಿನ ಭವಿಷ್ಯ ನುಡಿದು ಇಂತಹ ಸಂದರ್ಭದಲ್ಲಿ ಯಾರೋ ಇಬ್ಬರ ಮಾತು ಕೇಳಿ ಕಾಂಗ್ರೆಸ್ ಸೇರುವುದು ನಗೆಪಾಟಲಿನ ವಿಷಯ. ಅಂದಹಾಗೆ ನನ್ನ ಅಧಿಕಾರಾವಧಿ ಹಾಗೂ ಕುಮಾರಸ್ವಾಮಿ ಮುಖ್ಯಮಂತ್ರಿಯಾದಾಗ ಅರಸೀಕೆರೆ ಕ್ಷೇತ್ರಕ್ಕೆ ಮಾಡಿರುವ ಕೆಲಸಗಳನ್ನ ನೆನಯಬೇಕು, ಮುಂದೊಂದು ದಿನ ಇದರ ಬಗ್ಗೆ ಎಳೆಎಳೆ ಬಿಚ್ಚಿಇಡುವೆ ಎಂದು ಶಿವಲಿಂಗೇಗೌಡ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಎಚ್.ಡಿ.ರೇವಣ್ಣ.