Spread the love

ರ್ಕಿ ಭೂಕಂಪದಲ್ಲಿ ಕರ್ನಾಟಕ ಮೂಲದ ಟೆಕ್ಕಿತಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿದ್ದ ಟೆಕ್ಕಿಕ್ಕೆ ವಿಜಯಕುಮಾರ್ ಶವವಾಗಿ ಪತ್ತೆಯಾಗಿದ್ದಾರೆ.

ಟರ್ಕಿ ಭೂಕಂಪದಲ್ಲಿ ನಾಪತ್ತೆಯಾಗಿದ್ದ ಟೆಕ್ಕಿ ವಿಜಯಕುಮಾರ್ ಅವರು ಟರ್ಕಿಯ ಅನಾಟೋಲಿಯಾ ಪ್ರದೇಶದ ಹೋಟೆಲ್ ಅವಶೇಷಗಳ ಅಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

24 ಅಂತಸ್ತಿನ ಹೋಟೆಲ್ ನ ಎರಡನೇ ಮಹಡಿಯಲ್ಲಿ ವಿಜಯಕುಮಾರ್ ತಂಗಿದ್ದರು. ಹೋಟೆಲ್ ಅವಶೇಷಗಳ ತೆರವು ಕಾರ್ಯಾಚರಣೆ ವೇಳೆ ಅವರ ಮೃತದೇಹ ಪತ್ತೆಯಾಗಿದೆ.

ಫೆಬ್ರವರಿ 6 ರಂದು ಭೂಕಂಪದಿಂದ ಟರ್ಕಿಯಲ್ಲಿ ಕಾಣೆಯಾದ ಭಾರತೀಯ ಪ್ರಜೆ ವಿಜಯ್ ಕುಮಾರ್ ಅವರ ಪಾರ್ಥಿವ ಶರೀರವು ವ್ಯಾಪಾರ ಪ್ರವಾಸದಲ್ಲಿದ್ದ ಮಾಲತ್ಯದಲ್ಲಿನ ಹೋಟೆಲ್‌ನ ಅವಶೇಷಗಳ ನಡುವೆ ಪತ್ತೆಯಾಗಿದೆ. ಕುಟುಂಬವು ಹಚ್ಚೆ ಆಧಾರದ ಮೇಲೆ ಅವರನ್ನು ಗುರುತಿಸಿದೆ ಎಂದು ನಾವು ದುಃಖದಿಂದ ತಿಳಿಸುತ್ತೇವೆ ಎಂದು ಟರ್ಕಿಯಲ್ಲಿನ ಭಾರತೀಯ ರಾಯಭಾರ ಕಚೇರಿ ಟ್ವೀಟ್‌ನಲ್ಲಿ ತಿಳಿಸಿದೆ.

ಅವರ ಪಾರ್ಥಿವ ಶರೀರವನ್ನು ಅವರ ಕುಟುಂಬಕ್ಕೆ ಸಾಧ್ಯವಾದಷ್ಟು ಬೇಗ ಸಾಗಿಸಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ.


Spread the love

By admin