Spread the love

ರಾಯಪುರ: ತನ್ನ ಅನುಮತಿ ಕೇಳದೆ ಇಚ್ಛೆಗೆ ವಿರುದ್ಧವಾಗಿ ಪ್ರೇಮ ವಿವಾಹ ಮಾಡಿಕೊಂಡಿದ್ದಕ್ಕೆ ವ್ಯಕ್ತಿಯೊಬ್ಬ ತನ್ನ ಪತ್ನಿ ಹಾಗೂ ಮೂವರು ಪುತ್ರಿಯರ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ್ದಾನೆ.

ಛತ್ತೀಸ್‌ ಗಢ ಜಿಲ್ಲೆಯ ದುರ್ಗ್‌ ನಲ್ಲಿ ಘಟನೆ ನಡೆದಿದೆ.

ಆರೋಪಿ ಆಕ್ರೋಶದಿಂದ ಒಬ್ಬರನ್ನು ಕೊಂದು ಮೂವರನ್ನು ತೀವ್ರವಾಗಿ ಗಾಯಗೊಳಿಸಿದ್ದಾನೆ. ಸಂತ್ರಸ್ತೆಯನ್ನು ಜ್ಯೋತಿ ರೈ(18) ಎಂದು ಗುರುತಿಸಲಾಗಿದೆ. ಪ್ರೀತಿ(17), ಆಕೆಯ ತಾಯಿ ದೇವಂತಿ ರೈ(40) ಮತ್ತು ಆಕೆಯ ಅಕ್ಕ ವಂದನಾ ಸಿಂಗ್ ಸ್ಥಳೀಯ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಕೃತ್ಯವೆಸಗಿದ ನಂತರ ಆರೋಪಿ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.

ಚಾಲಕ ಅಮರ್ ದೇವ್ ರೈ ಶುಕ್ರವಾರ ರಾತ್ರಿ ಮನೆಗೆ ಬಂದು ತನ್ನ ಹಿರಿಯ ಮಗಳು ಪ್ರೀತಿಸಿ ಮದುವೆಯಾಗಿರುವ ಬಗ್ಗೆ ಪತ್ನಿಯೊಂದಿಗೆ ಜಗಳವಾಡಿದ್ದಾನೆ. ಪ್ರೇಮವಿವಾಹದ ನಿರ್ಧಾರದ ಬಗ್ಗೆ 22 ವರ್ಷದ ವಂದನಾಳನ್ನು ರೈ ಪ್ರಶ್ನಿಸಿದಾಗ ಅವರ ಹೆಣ್ಣುಮಕ್ಕಳು ಕೂಡ ಜಗಳದಲ್ಲಿ ಭಾಗಿಯಾಗಿದ್ದರು. ಬೆಳಗಿನ ಜಾವ 3.30ರ ಸುಮಾರಿಗೆ ಆರೋಪಿ ಮಲಗಿದ್ದ ಮನೆಯವರ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ್ದಾರೆ.

ಆದರೆ, ಇಡೀ ಜಗಳದಲ್ಲಿ ಅವನು ತನ್ನ 12 ವರ್ಷದ ಮಗನ ಮೇಲೆ ಹಲ್ಲೆ ನಡೆಸಲಿಲ್ಲ. ಆತ ಇನ್ನೊಂದು ಕೋಣೆಯಲ್ಲಿ ಮಲಗಿದ್ದ. ಆಘಾತಕ್ಕೊಳಗಾದ ಪ್ರತ್ಯಕ್ಷದರ್ಶಿ ಬಾಲಕ ತನ್ನ ಸಹೋದರಿಯರು ಮತ್ತು ತಾಯಿಯ ಮೇಲೆ ತನ್ನ ತಂದೆ ಹಲ್ಲೆ ನಡೆ


Spread the love

By admin