Spread the love

ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಇತ್ಯರ್ಥಕಾಗಿ ಶೇಕಡ 50 ರಿಯಾಯಿತಿ ಸೌಲಭ್ಯವನ್ನು ನೀಡಲಾಗಿದ್ದು, ಇದನ್ನು ವಾಹನ ಮಾಲೀಕರು ಸಮರ್ಪಕವಾಗಿ ಬಳಸಿಕೊಂಡಿದ್ದಾರೆ. ಶನಿವಾರ ಈ ಗಡುವು ಅಂತ್ಯವಾಗಿದ್ದು, ಕೇವಲ ಒಂಬತ್ತು ದಿನಗಳ ಅವಧಿಯಲ್ಲಿ ಬರೋಬ್ಬರಿ 122 ಕೋಟಿ ರೂಪಾಯಿ ದಂಡ ಸಂಗ್ರಹವಾಗಿದೆ.

 

ಅಂತಿಮ ದಿನದಂದು ಸಾರ್ವಜನಿಕರು ಆನ್ಲೈನ್ ಮೂಲಕ ಮಾತ್ರವಲ್ಲದೆ ಪೊಲೀಸ್ ಠಾಣೆಗಳ ಬಳಿ ಆರಂಭಿಸಿದ್ದ ಕೌಂಟರ್ ನಲ್ಲಿಯೂ ಸಹ ದಂಡ ಪಾವತಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಕೆಲವರು, ರಿಯಾಯಿತಿ ದಂಡ ಪಾವತಿಗೆ ಅವಕಾಶ ಕಲ್ಪಿಸಿದ್ದು ಸಮರ್ಪಕವಾಗಿದೆ. ಆದರೆ ಅವಧಿಯನ್ನು ಮತ್ತಷ್ಟು ವಿಸ್ತರಿಸಬೇಕಿತ್ತು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಇದರ ಮಧ್ಯೆ ಹುಬ್ಬಳ್ಳಿಯಲ್ಲಿ ಅಪರೂಪದ ಪ್ರಕರಣ ಒಂದು ಬೆಳಕಿಗೆ ಬಂದಿದೆ. ಸೂರಜ್ ಸಿಂಗ್ ಠಾಕೂರ್ ಎಂಬ ಯುವಕನ ಬೈಕಿನ ಮೇಲೆ ಬರೋಬ್ಬರಿ 57 ಪ್ರಕರಣಗಳು ದಾಖಲಾಗಿರುವುದು ಬಹಿರಂಗವಾಗಿದ್ದು, ಇದಕ್ಕಾಗಿ 28,500 ರೂಪಾಯಿ ದಂಡ ವಿಧಿಸಲಾಗಿತ್ತು. ಶೇಕಡ 50 ರಿಯಾಯಿತಿ ಸೌಲಭ್ಯ ಪಡೆದ ಆತ ಹುಬ್ಬಳ್ಳಿಯ ಹಳೆ ಕೋರ್ಟ್ ಸರ್ಕಲ್ ಹತ್ತಿರ ಇರುವ ಸಂಚಾರಿ ಪೊಲೀಸರ ಬಳಿ 14,250 ರೂಪಾಯಿಗಳನ್ನು ಪಾವತಿಸಿದ್ದಾರೆ.


Spread the love

By admin