Spread the love

ಬೆಳಗಾವಿ: ಹಣಕಾಸಿನ ವಿಚಾರವಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಬಂಗಾರದ ಉದ್ಯಮಿಯಿಂದ ಸಾಲ ಪಡೆದ ವೈದ್ಯನೊಬ್ಬ ಬಳಿಕ ಉದ್ಯಮಿಯನ್ನೇ ಕಿಡ್ನ್ಯಾಪ್ ಮಾಡಿ ಹತ್ಯೆಗೈದಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ನಲ್ಲಿ ನಡೆದಿದೆ.

ಪ್ರಕರಣ ಸಂಬಂಧ ಆರೋಪಿ ವೈದ್ಯ ಸಚಿನ್ ನನ್ನು ಗೋಕಾಕ್ ಪೊಲೀಸರು ಬಂಧಿಸಿದ್ದಾರೆ.

ಗೋಲ್ಡ್ ಉದ್ಯಮಿ ರಾಜು ಝಂವರ್ ನಾಪತ್ತೆ ಪ್ರಕರಣವನ್ನು ಪತ್ತೆ ಹಚ್ಚಿದ ಪೊಲೀಸರಿಗೆ ರಾಜು ಸ್ನೇಹಿತ ವೈದ್ಯನೇ ಕೊಲೆಗಾರ ಎಂಬುದು ಗೊತ್ತಾಗಿದೆ.

ಡಾ.ಸಚಿನ್ ಶಿರಗಾವಿ ಹಾಗೂ ಉದ್ಯಮಿ ರಾಜು ನಡುವೆ ಹಣಕಾಸಿನ ವಿಚಾರವಾಗಿ ಜಗಳವಾಗಿದೆ. ಸಚಿನ್ ರಾಜುವಿನಿಂದ ಹಣ ಪಡೆದಿದ್ದ ಎನ್ನಲಾಗಿದೆ. ಹಣ ವಾಪಸ್ ಕೇಳಿದಾಗ ಗಲಾಟೆ ಆರಂಭವಾಗಿದೆ. ಇದೇ ವಿಚಾರವಾಗಿ ಮಾತನಾಡಲು ಬರುವಂತೆ ಹೇಳಿ ಡಾ.ಸಚಿನ್, ರಾಜು ನನ್ನು ಆಸ್ಪತ್ರೆಗೆ ಕರೆಸಿಕೊಂಡಿದ್ದ, ಆಸ್ಪತ್ರೆಗೆ ಹೋದ ರಾಜು ನಾಪತ್ತೆಯಾಗಿದ್ದಾನೆ.

ಈ ಬಗ್ಗೆ ಗೋಕಾಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಡಾ.ಸಚಿನ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ರಾಜುನನ್ನು ಕಿಡ್ನ್ಯಾಪ್ ಮಾಡಿ ಕೊಲೆಗೈದು, ಬಳಿಕ ಶವವನ್ನು ಕಾಲುವೆಗೆ ಬಿಸಾಕಿದ್ದಾಗಿ ಬಾಯ್ಬಿಟ್ಟಿದ್ದಾನೆ. ಆರೋಪಿ ಸಚಿನ್ ನನ್ನು ಪೊಲೀಸರು ಬಂಧಿಸಿದ್ದಾರೆ.


Spread the love

By admin