Spread the love

ಹುಬ್ಬಳ್ಳಿ: ಬಡವರ ಜೀವನದಲ್ಲಿ ರಾಷ್ಟ್ರೀಯ ಪಕ್ಷಗಳು ಚಲ್ಲಾಟವಾಡುತ್ತಿವೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಬಿಜೆಪಿ ಹಾಗೂ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಸಿದ್ದರಾಮಯ್ಯ ಅವರೇ ಕಾರಣ.

ಮೈತ್ರಿ ಸರ್ಕಾರ ರಚನೆಯಾದ ಎರಡೇ ತಿಂಗಳಿಗೆ ಸರ್ಕಾರ ಪತನಗೊಳಿಸಲು ಯತ್ನಿಸಿದರು. ಅವರು ಸಿದ್ದರಾಮಯ್ಯ ಅಲ್ಲ, ಬರಿ ಸುಳ್ಳಿನ ರಾಮಯ್ಯ ಎಂದು ಕಿಡಿದ್ದಾರೆ.

ಬಿಜೆಪಿಯವರ ಅಕ್ರಮಗಳನ್ನು ಹೊರತಂದಿದ್ದು ನಾನು, ಸಿದ್ದರಾಮಯ್ಯ ಅಲ್ಲ, ಸಿದ್ದರಾಮಯ್ಯ ಕುರ್ಚಿಗಾಗಿ ಕುತಂತ್ರ ರಾಜಕಾರಣ ಮಾಡುತ್ತಿದ್ದಾರೆ. ಬಿಜೆಪಿಯವರು ನನಗೆ ಸಿಎಂ ಸ್ಥಾನ ಕೊಡಲು ಸಿದ್ದರಿದ್ದರು. ಇನ್ನೂ ಹತ್ತು ವರ್ಷವಾದರೂ ಕಾಂಗ್ರೆಸ್ ನವರಿಗೆ ಬಿಜೆಪಿ ತೆಗೆಯಲು ಆಗಲ್ಲ. ಜೆಡಿಎಸ್ ನಿಂದ ಮಾತ್ರ ಬಿಜೆಪಿ ತೆಗೆಯಲು ಸಾಧ್ಯ ಎಂದು ಹೇಳಿದರು.


Spread the love

By admin