Spread the love

ತಾಯಿ ಕೆಲಸ ಮಾಡುತ್ತಿದ್ದಾಗ ಎರಡನೇ ಮಹಡಿಯಲ್ಲಿರುವ ಎಲಿವೇಟರ್ ಶಾಫ್ಟ್ ಗೆ ಆಕಸ್ಮಿಕವಾಗಿ ಜಾರಿ ಬಿದ್ದು 15 ವರ್ಷದ ಬಾಲಕ ಮೃತಪಟ್ಟಿರೋ ಹೃದಯವಿದ್ರಾವಕ ಘಟನೆ ದೆಹಲಿಯಲ್ಲಿ ನಡೆದಿದೆ.

ನೆಲ ಮಹಡಿಯಿಂದ ಲಿಫ್ಟ್ ಮೇಲಕ್ಕೆ ಬಂದಾಗ ಬಾಲಕನ ದೇಹ ನಜ್ಜುಗುಜ್ಜಾಗಿತ್ತು.

ಬಾಲಕನನ್ನು ಅಲೋಕ್ ಎಂದು ಗುರುತಿಸಲಾಗಿದೆ. ಅವರನ ತಾಯಿ ಇದೇ ಕಟ್ಟಡದಲ್ಲಿರುವ ಏರ್ ಕೂಲರ್ ಕಾರ್ಖಾನೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ.

ದೆಹಲಿಯ ಬವಾನಾ ಇಂಡಸ್ಟ್ರಿಯಲ್ ಏರಿಯಾದಲ್ಲಿ ಭಾನುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಲಿಫ್ಟ್ ಬಳಿ ಇದ್ದ ಬಾಲಕ ಆಕಸ್ಮಿಕವಾಗಿ ಜಾರಿ ಬಿದ್ದು ಎರಡನೇ ಮಹಡಿಯಲ್ಲಿದ್ದ ಅದರ ಶಾಫ್ಟ್ ನಲ್ಲಿ ಸಿಲುಕಿಕೊಂಡಿದ್ದಾನೆ.

ಯಾಂತ್ರಿಕ ಲಿಫ್ಟ್ ನ್ನು ಮುಖ್ಯವಾಗಿ ಭಾರವಾದ ಸರಕುಗಳನ್ನು ಸಾಗಿಸಲು ಬಳಸಲಾಗುತ್ತಿತ್ತು. ಅಲೋಕ್ ತಂತಿಗಳೊಂದಿಗೆ ಹೆಣಗಾಡುತ್ತಿರುವಾಗ, ಯಾರೋ ನೆಲ ಮಹಡಿಯಲ್ಲಿನ ಲಿಫ್ಟ್ ಗೆ ಇಳಿದು ಎರಡನೇ ಮಹಡಿಯ ಗುಂಡಿಯನ್ನು ಒತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಘಟನೆ ವೇಳೆ ಬಾಲಕನಿಗೆ ಹೆಚ್ಚಿನ ಗಾಯಗಳಾಗಿವೆ. ಕತ್ತಿಗೆ ವೈರ್ ಗಳು ಸುತ್ತಿಕೊಂಡ ನಂತರ ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ತಕ್ಷಣ ಬಾಲಕನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ.

ಬಾಲಕನ ತಾಯಿ ಕಾರ್ಖಾನೆ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದರಿಂದ ಮಗನನ್ನು ಕರೆದುಕೊಂಡು ಬಂದಿದ್ದರು. ಆತ ಆಟವಾಡುತ್ತಿದ್ದ ಎನ್ನಲಾಗಿದೆ. ಆದರೆ ಆಕೆಯ ತಾಯಿ ಕಾರ್ಖಾನೆ ಮಾಲೀಕರು ಆತನಿಗೆ ಕೆಲಸ ಮಾಡುವಂತೆ ತಳ್ಳಿದ್ದಾರೆ ಎಂದು ಆರೋಪಿಸಿದ್ದಾರೆ.


Spread the love

By admin