Spread the love

ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡ ಪಾವತಿಗೆ ಶೇಕಡ 50 ರಷ್ಟು ರಿಯಾಯಿತಿ ಅವಧಿಯನ್ನು ಮತ್ತೆ 15 ದಿನ ವಿಸ್ತರಿಸಲು ತೀರ್ಮಾನಿಸಲಾಗಿದೆ.

ಜನಸಾಮಾನ್ಯರಿಂದ ರಿಯಾಯಿತಿ ವಿಸ್ತರಿಸುವಂತೆ ಮನವಿ ಹಿನ್ನೆಲೆಯಲ್ಲಿ ಕ್ರಮ ಕೈಗೊಂಡಿದ್ದು, ಮತ್ತೆ ಟ್ರಾಫಿಕ್ ಫೈನ್ ರಿಯಾಯಿತಿ ಎರಡು ವಾರ ವಿಸ್ತರಣೆ ಮಾಡಲಾಗುವುದು.

 

ಟ್ರಾಫಿಕ್ ಫೈನ್ ರಿಯಾಯಿತಿ ವಿಸ್ತರಿಸಬೇಕೆಂದು ಜನಸಾಮಾನ್ಯರಿಂದ ಬೇಡಿಕೆ ಇದ್ದು, ಪೊಲೀಸ್, ಸಾರಿಗೆ ಇಲಾಖೆಯಿಂದಲೂ ಈ ಸಂಬಂಧ ಪತ್ರ ಬಂದಿತ್ತು. ಸಿಜೆ ಪ್ರಸನ್ನ ಬಿ ವರಾಳೆ ಸಹ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿದ್ದರು. ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಹೈಕೋರ್ಟ್ ನ್ಯಾಯಮೂರ್ತಿ ಬಿ. ವೀರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಹಿರಿಯ ಪೋಲಿಸ್ ಅಧಿಕಾರಿಗಳು, ಸಾರಿಗೆ ಇಲಾಖೆ ಅಧಿಕಾರಿಗಳು, ಕಾನೂನು ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಭಾಗವಹಿಸಿದ್ದ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಂಡಿದ್ದು, ಸರ್ಕಾರಕ್ಕೆ ಟ್ರಾಫಿಕ್ ಫೈನ್ ರಿಯಾಯಿತಿ ಅವಧಿ ವಿಸ್ತರಿಸಲು ಮನವಿ ಮಾಡಲಾಗುವುದು ಎಂದು ಹೇಳಲಾಗಿದೆ.


Spread the love

By admin