Spread the love

ಗುರುಗ್ರಾಮ್: ಆಘಾತಕಾರಿ ಘಟನೆಯೊಂದರಲ್ಲಿ, ಹರಿಯಾಣದ ಗುರುಗ್ರಾಮ್‌ನ ಸಹಾರಾ ಮಾಲ್‌ನ ನೆಲಮಾಳಿಗೆಯಲ್ಲಿ ನಿಲ್ಲಿಸಿದ್ದ ಕಾರ್ ನಲ್ಲಿ ವ್ಯಕ್ತಿಯೊಬ್ಬ ಮಹಿಳೆಗೆ ಮಾದಕ ದ್ರವ್ಯ ನೀಡಿ ಅತ್ಯಾಚಾರ ಎಸಗಿದ್ದಾನೆ.

ಸಂತ್ರಸ್ತೆ ಪೊಲೀಸರಿಗೆ ಮಾಹಿತಿ ನೀಡಿ, ಆರೋಪಿ ತುಷಾರ್ ಶರ್ಮಾ ತನ್ನನ್ನು ಸಂದರ್ಶನಕ್ಕೆ ಕರೆದ ನಂತರ ನಿದ್ರಾಜನಕ ಮಿಶ್ರಿತ ನೀರನ್ನು ನೀಡಿದ್ದು, ಬಳಿಕ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಹೇಳಿಕೊಂಡಿದ್ದಾಳೆ.

 

ಮಹಿಳೆಯ ದೂರಿನ ಪ್ರಕಾರ, ಅವಳು ಡಿಎಲ್‌ಎಫ್ ಸೊಸೈಟಿಯ ನಿವಾಸಿಯಾಗಿದ್ದು, ಆನ್‌ಲೈನ್ ಉದ್ಯೋಗವನ್ನು ಹುಡುಕುತ್ತಿದ್ದಳು. 27 ವರ್ಷದ ಮಹಿಳೆ ತುಷಾರ್ ಅವರನ್ನು ಸಂಪರ್ಕಿಸಿದಾಗ ಫೆಬ್ರವರಿ 12 ರಂದು ಸಹಾರಾ ಮಾಲ್‌ ನಲ್ಲಿ ಸಂದರ್ಶನಕ್ಕೆ ಬರುವಂತೆ ಹೇಳಿದ್ದ. ಅವಳು ಸ್ಥಳವನ್ನು ತಲುಪಿದಾಗ ಅವನು ನೆಲಮಾಳಿಗೆಗೆ ಬರಲು ಹೇಳಿದನು.

ದೂರವಾಣಿ ಮಾತುಕತೆಯಂತೆ ನಾನು ಶನಿವಾರ ಮಧ್ಯಾಹ್ನ 1 ಗಂಟೆಗೆ ಮಾಲ್‌ಗೆ ತಲುಪಿದೆ. ಅವರು ನನ್ನನ್ನು ಪ್ರವೇಶದ್ವಾರದಲ್ಲಿ ಭೇಟಿಯಾದರು ಮತ್ತು ಕೆಲಸದ ಬಗ್ಗೆ ಚರ್ಚಿಸಲು ನನ್ನನ್ನು ಕೇಳಿದರು. ನನ್ನನ್ನು ಮಾಲ್‌ ನ ನೆಲಮಾಳಿಗೆಗೆ ಕರೆದೊಯ್ದರು, ಅಲ್ಲಿ ಅವರು ನನಗೆ ನೀರು ನೀಡಿದರು. ಶೀಘ್ರದಲ್ಲೇ ನಾನು ಪ್ರಜ್ಞೆ ಕಳೆದುಕೊಂಡೆ. ಇದಾದ ಬಳಿಕ ಆತ ಅಪರಾಧ ಎಸಗಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಎಫ್‌ಐಆರ್‌ನಲ್ಲಿ ತಿಳಿಸಿದ್ದಾಳೆ.

ಪ್ರಜ್ಞೆ ಬಂದ ನಂತರ ಮಹಿಳೆ ಪೊಲೀಸರಿಗೆ ಬಂದು ದೂರು ನೀಡಿದ್ದಾಳೆ. ಪೊಲೀಸರು ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದು ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ. ನಾವು ದೂರಿನ ಆರೋಪಗಳನ್ನು ಪರಿಶೀಲಿಸುತ್ತಿದ್ದೇವೆ. ಆರೋಪಿಯನ್ನು ಇನ್ನೂ ಬಂಧಿಸಬೇಕಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


Spread the love