Spread the love

ರ್ಥಿಕ ಸ್ಥಿತಿಯಲ್ಲಿ ಅಧೋಗತಿಗಿಳಿದಿರೋ ಪಾಕಿಸ್ತಾನದಲ್ಲಿ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿವೆ. ಪಾಕಿಸ್ತಾನದ ಹಣದುಬ್ಬರವು ಹೊಸ ದಾಖಲೆಯನ್ನೇ ಸೃಷ್ಟಿಸಿದೆ.

ಹಾಲಿನ ಬೆಲೆಯು ಇದೇ ಮೊದಲ ಬಾರಿಗೆ ಪ್ರತಿ ಲೀಟರ್ ಗೆ 200 ರೂಪಾಯಿಯಾಗಿದೆ. ಕೆಲವು ಅಂಗಡಿಯವರು ಲೀಟರ್‌ಗೆ 190 ರೂ.ಗಳಿಂದ 210 ರೂ.ಗೆ ಹೆಚ್ಚಿಸಿದ್ದಾರೆ.

 

ಚಿಕನ್ ಬೆಲೆ ಕಳೆದ ಎರಡು ದಿನಗಳಲ್ಲಿ ಕೆಜಿಗೆ 30 ರಿಂದ 40 ರೂಪಾಯಿಗೆ ಏರಿಕೆಯಾಗಿದ್ದು ಸದ್ಯ 480-500 ರೂಪಾಯಿ ಪ್ರತಿ ಕೆ.ಜಿ. ಚಿಕನ್ ಬೆಲೆಯಾಗಿದೆ.

ಮೂಳೆಗಳಿಲ್ಲದ ಮಾಂಸದ ಬೆಲೆ ಕೆಜಿಗೆ 1,000-1,100 ರೂ.ಗಳ ಹೊಸ ಗರಿಷ್ಠ ಮಟ್ಟವನ್ನು ತಲುಪಿದೆ.

1975 ರ ನಂತರ ಪಾಕಿಸ್ತಾನದಲ್ಲಿ ದಿನನಿತ್ಯದ ವಸ್ತುಗಳ ಬೆಲೆ ಅತ್ಯಧಿಕ ಮಟ್ಟವನ್ನು ತಲುಪಿದೆ. ಪರಿಣಾಮವಾಗಿ ಅಗತ್ಯ ವಸ್ತುಗಳ ಬೆಲೆಗಳ ಹೆಚ್ಚಳವು ಸಾಮಾನ್ಯ ಜನರಿಗೆ ದೊಡ್ಡ ಹೊಡೆತ ನೀಡಿದೆ.


Spread the love

By admin