Spread the love

ಬೆಂಗಳೂರು: ಅಡಕೆಯಿಂದ ಕ್ಯಾನ್ಸರ್ ಗೆ ಔಷಧಿ ತಯಾರಿಸಬಹುದಾಗಿದೆ ಎಂದು ಎಂ.ಎಸ್. ರಾಮಯ್ಯ ತಾಂತ್ರಿಕ ವಿವಿ ವರದಿ ಸಲ್ಲಿಸಿದೆ.

ಆಡಿಕೆಯಲ್ಲಿ ಕ್ಯಾನ್ಸರ್ ಕಾರಕ ಅಂಶಗಳಿಲ್ಲ. ಇದರಿಂದ ಕ್ಯಾನ್ಸರ್ ನಿವಾರಕ ಔಷಧಿ ತಯಾರಿಸಬಹುದಾಗಿದೆ ಎಂದು ಹೇಳಿದ್ದು, ಇದು ಅಡಿಕೆ ಬೆಳೆಗಾರರಲ್ಲಿ ಸಂತಸ ತಂದಿದೆ ಎಂದು ಅಡಿಕೆ ಕಾರ್ಯಪಡೆ ಅಧ್ಯಕ್ಷರಾಗಿರುವ ಗೃಹ ಸಚಿವ ಆರೋಗ್ಯ ಜ್ಞಾನೇಂದ್ರ ಹೇಳಿದ್ದಾರೆ.

 

ವಿಧಾನ ಪರಿಷತ್ ನಲ್ಲಿ ಬಿಜೆಪಿ ಸದಸ್ಯ ಕೆ. ಪ್ರತಾಪಸಿಂಹ ನಾಯಕ ಅವರು ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರ ನೀಡಿದ ಸಚಿವರು, ಕೇಂದ್ರದ ಈ ಹಿಂದಿನ ಸರ್ಕಾರ ಅಡಿಕೆ ಕ್ಯಾನ್ಸರ್ ಕಾರಕ ಎಂದು ಸುಪ್ರೀಂ ಕೋರ್ಟ್ ಗೆ ವರದಿ ಸಲ್ಲಿಸಿದ್ದು, ಅಡಿಕೆ ಬೆಳೆಗಾರರ ಮೇಲೆ ತೂಗು ಕತ್ತಿ ನೇತಾಡುತ್ತಿತ್ತು. ಈ ಹಿನ್ನೆಲೆಯಲ್ಲಿ ಅಡಕೆ ಕುರಿತು ಸಂಶೋಧನೆ ಮತ್ತು ಕ್ಲಿನಿಕಲ್ ಟ್ರಯಲ್ ಕೈಗೊಳ್ಳಲು ಎಂ.ಎಸ್. ರಾಮಯ್ಯ ಸಂಸ್ಥೆಗೆ ಹೊಣೆ ವಹಿಸಲಾಗಿತ್ತು. ಆ ಸಂಸ್ಥೆಯಿಂದ ವರದಿ ಬಂದಿದ್ದು, ಅಡಿಕೆಯಲ್ಲಿ ಯಾವುದೇ ಕ್ಯಾನ್ಸರ್ ಕಾರಕ ಅಂಶಗಳು ಇಲ್ಲವೆಂದು ಸ್ಪಷ್ಟಪಡಿಸಿದೆ. ಕೆನಡಾದ ವಿಜ್ಞಾನಿಯೊಬ್ಬರು ಅಡಕೆಯಿಂದ ಒಡೆಯಲು ಸಾಧ್ಯವಾಗದ ಗಾಜು ತಯಾರಿಸಬಹುದೆಂದು ಹೇಳಿದ್ದು, ಇಂತಹ ಗಾಜುಗಳನ್ನು ಯೋಧರಿಗೆ ಒದಗಿಸಬಹುದಾಗಿದೆ. ಅಡಕೆ ಕಾರ್ಯಪಡೆಯಿಂದ ಈ ಬಗ್ಗೆ ಸಂಶೋಧನೆ ನಡೆಸಲು ಆ ವಿಜ್ಞಾನಿಗೆ ಹಣ ನೀಡಲಾಗುತ್ತಿದೆ ಎಂದರು.


Spread the love

By admin