Spread the love

ಮುಂಬರುವ ವಿಧಾನಸಭಾ ಚುನಾವಣೆಗೆ ಜೆಡಿಎಸ್ ಭರ್ಜರಿ ತಯಾರಿ ನಡೆಸುತ್ತಿದ್ದು, ಶಾಸಕಾಂಗ ಪಕ್ಷದ ನಾಯಕ ಎಚ್ ಡಿ ಕುಮಾರಸ್ವಾಮಿ ರಾಜ್ಯದಾದ್ಯಂತ ಪಂಚರತ್ನ ರಥಯಾತ್ರೆ ನಡೆಸುತ್ತಿದ್ದಾರೆ.

ಪಂಚರತ್ನ ರಥಯಾತ್ರೆ ಈಗ ಹುಬ್ಬಳ್ಳಿ – ಧಾರವಾಡದಲ್ಲಿ ಸಂಚರಿಸುತ್ತಿದ್ದು, ಹುಬ್ಬಳ್ಳಿ ತಾಲೂಕಿನ ಹೆಬಸೂರಿನ ಖಾಸಗಿ ಶಾಲಾ ಮೈದಾನದಲ್ಲಿ ಕುಮಾರಸ್ವಾಮಿಯವರು ವಾಸ್ತವ್ಯ ಹೂಡಿದ್ದರು.

 

ಹೈಟೆಕ್ ಬಸ್ ನಲ್ಲಿ ವಿಶ್ರಾಂತಿ ಪಡೆದಿರುವ ಅವರು ಬಳಿಕ ಬೆಳಿಗ್ಗೆ ಸ್ನಾನಕ್ಕಾಗಿ ಫಿಲ್ಟರ್ ವಾಟರ್ ಬಳಸಿದ್ದಾರೆ. ಇದು ಈಗ ಟೀಕೆಗೆ ಗುರಿಯಾಗಿದ್ದು, ಸರಳತೆಯ ಭಾಷಣ ಮಾಡುವ ಕುಮಾರಸ್ವಾಮಿ ಅವರು ಫಿಲ್ಟರ್ ವಾಟರ್ ಬಳಸಿದ್ದು ಎಷ್ಟು ಸರಿ ಎಂದು ಪ್ರಶ್ನಿಸಲಾಗುತ್ತಿದೆ.


Spread the love

By admin