Spread the love

ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ಏರೋ ಇಂಡಿಯಾ ‘ಏರ್ ಶೋ’ ಈಗಾಗಲೇ ಎಲ್ಲರ ಗಮನ ಸೆಳೆದಿದೆ. ಇದೀಗ ಇಂದಿನಿಂದ ಎರಡು ದಿನಗಳ ಕಾಲ ಏರ್ ಶೋ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಸಿಗಲಿದೆ.

ಆನ್ ಲೈನ್ ನಲ್ಲಿ ಟಿಕೆಟ್ ಬುಕ್ ಮಾಡಿದವರಿಗಷ್ಟೇ ಏರ್ ಶೋ ವೀಕ್ಷಣೆಗೆ ಅವಕಾಶ ಲಭ್ಯವಾಗಲಿದ್ದು, ಈಗಾಗಲೇ ಸಾಕಷ್ಟು ಸಂಖ್ಯೆಯಲ್ಲಿ ಸಾರ್ವಜನಿಕರು ಟಿಕೆಟ್ ಬುಕ್ ಮಾಡಿದ್ದಾರೆ ಎಂದು ಹೇಳಲಾಗಿದೆ.

 

ಈ ಏರ್ ಶೋನಲ್ಲಿ ಸಾರಂಗ್ ಹೆಲಿಕಾಪ್ಟರ್, ಸೂರ್ಯ ಕಿರಣ್ ತೇಜಸ್ವಿ ಯುದ್ಧವಿಮಾನ, ರಫೆಲ್ ಯುದ್ಧ ವಿಮಾನ, ಅಮೆರಿಕದ ಎಫ್ 35 ಎ ಫೈಟರ್ ಜೆಟ್, ಎಚ್ ಎ ಎಲ್ ನಿರ್ಮಿತ ಕಾಂಬಾಕ್ಟ್ ಹೆಲಿಕ್ಯಾಪ್ಟರ್ ಮೊದಲಾದವು ಪ್ರದರ್ಶನ ನೀಡಲಿವೆ.


Spread the love

By admin