ಬೆಂಗಳೂರು;- ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಕನ್ನಡ ಸಂಘಟನೆಗಳು ಬೆಂಗಳೂರಿನಿಂದ ಕೆಆರ್ಎಸ್ಗೆ ಮುತ್ತಿಗೆ ಹಾಕಲು ರೆಡಿಯಾಗಿವೆ.
ಮೊನ್ನೆ ಮೊನ್ನೆ ಕರ್ನಾಟಕ ಬಂದ್ ಮಾಡಿದ್ದ ವಾಟಾಳ್ ನೇತೃತ್ವದ ಸಂಘಟನೆಗಳು ಇಂದು ಕೆ.ಆರ್.ಎಸ್ ಡ್ಯಾಂಗೆ ಮುತ್ತಿಗೆ ಹಾಕಲು ರೆಡಿಯಾಗಿವೆ. ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್ನಿಂದ ಱಲಿ ನಡೆಸುವ ಮೂಲಕ ರಾಮನಗರ, ಮದ್ದೂರು, ಮಂಡ್ಯ ರೈತರನ್ನೂ ಱಲಿಗೆ ಬರಲು ಆಹ್ವಾನಿಸಿದ್ದಾರೆ.
ಕೆಆರ್ಎಸ್ ಚಲೋ ಹಿನ್ನೆಲೆಯಲ್ಲಿ ಬೆಂಗಳೂರು ಸಂಚಾರ ಪೊಲೀಸರು ಟ್ರಾಫಿಕ್ ಮಾರ್ಗವನ್ನು ಬಿಡುಗಡೆ ಮಾಡಿದ್ದು, ವಾಟಾಳ್ ನಾಗರಾಜ್ ಅವರ ನೇತೃತ್ವದಲ್ಲಿ ವಿವಿಧ ಕನ್ನಡಪರ ಸಂಘಟನೆಗಳಿಂದ ಮೈಸೂರು ಬ್ಯಾಂಕ್ ಸರ್ಕಲ್ ನಿಂದ ಕೆಜಿ ರಸ್ತೆಯ ಮೂಲಕ ಮೈಸೂರು ರಸ್ತೆ, ಮಂಡ್ಯ ಜಿಲ್ಲೆಯ ಕೆಆರ್ ಎಸ್ವರೆಗೂ ವಾಹನಗಳಲ್ಲಿ ಭಾರೀ ಮೆರವಣಿಗೆ ಹಮ್ಮಿಕೊಂಡಿರುವ ಕಾರಣ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದ್ದು, ಸಾರ್ವಜನಿಕರು ಬದಲಿ ರಸ್ತೆಯ ಮೂಲಕ ಸಂಚರಿಸಲು ಸೂಚನೆ ನೀಡಿದ್ದಾರೆ.
ತಮಿಳುನಾಡಿಗೆ ಕಾವೇರಿ ನೀರು ನಿಲ್ಲಿಸದ ಹಿನ್ನೆಲೆ ಮಂಡ್ಯದಲ್ಲಿ ನಿತ್ಯ ಪ್ರತಿಭಟನೆ ನಡೆಯುತ್ತಲೇ ಇದೆ. ಮಂಡ್ಯದ ಕನ್ನಡ ಸೇನೆ ಕಾರ್ಯಕರ್ತರು ಕಾವೇರಿ ಮಾತೆಗೆ ಮಂಡ್ಯದಲ್ಲಿ ಪೂಜೆ ಸಲ್ಲಿಸಿದರು. ಮಳೆ ಬಂದು ಕಾವೇರಿ ತುಂಬಲಿ ಎಂದು ಕಾವೇರಿ ನೀರಾವರಿ ನಿಗಮದ ಕಚೇರಿ ಮುಂಭಾಗ ಇರೋ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಕಿಡಿಕಾರಿದರು.