ಇಂದು ಪಾವಗಡ ತಾಲೂಕಿನ ಖಾಸಗಿ ಬಸ್ ಒಂದು ಪಲ್ಟಿಯಾಗಿ ಬೀಕರ ಸಾವು-ನೋವುಗಳನ್ನು ಉಂಟು ಮಾಡಿರುವ ಘಟನೆ ಇಡೀ ರಾಜ್ಯದಲ್ಲಿ ಸದ್ದು ಮಾಡಿದೆ.
ವೈಎನ್ ಹೊಸಕೋಟೆ ಮಾರ್ಗದಿಂದ ಪಾವಗಡಕ್ಕೆ ಬರುತ್ತಿದ್ದ . ಖಾಸಗಿ ಎಸ್. ವಿ. ಟಿ. ಬಸ್ ಕಿಕ್ಕಿರಿದ ಜನಸಂದಣಿಯಲ್ಲಿ 150 ಹೆಚ್ಚು ಜನರನ್ನು ಹೊತ್ತು ಸಾಗುತ್ತಿದ್ದು ಬಸ್ ನ ಟಾಪ್ ನಲ್ಲಿಯೆ 50 ಜನ ವಿದ್ಯಾರ್ಥಿಗಳು ಇದ್ದರೂ ಎನ್ನಲಾಗಿದೆ. ಸುಮಾರು 16 ಕಿಮೀ ದೂರವರೆಗೂ 90ರ ವೇಗದಲ್ಲಿಯೆ ಚಲಿಸುತ್ತಿದ್ದ ಬಸ್ಸು ತಿರುವಿನ ಅಂಚಿನಲ್ಲಿಯೂ ಕೂಡ ವೇಗವನ್ನು ಕಡಿಮೆ ಮಾಡಿಕೊಳ್ಳದೆ ಚಾಲಾಯಿಸಿರುವುದೆ ಈ ಘಟನೆಗೆ ಮೂಲ ಕಾರಣವಾಗಿದೆ. ಇನ್ನು ಈ ದುರದೃಷ್ಟಕರ ಘಟನೆ ಯಲ್ಲಿ 8 ಮೃತಪಟ್ಟಿದ್ದು 25 ಕ್ಕೂ ಹೆಚ್ಚು ಜನರು ಗಾಯಗೊಂಡು ತುರ್ತು ಚಿಕಿತ್ಸೆಗಾಗಿ ತುಮಕೂರು, ಬೆಂಗಳೂರು ಸೇರಿದಂತೆ ಹಲವಾರು ಆಸ್ಪತ್ರೆಗಳಿಗೆ ಕೊಂಡೊಯ್ಯಲಾಗಿದೆ. ಇಂತಹ ದುರಂತ ಘಟನೆಯ ನಡುವೆಯು ತುಮಕೂರು ಜಿಲ್ಲಾಧಿಕಾರಿಯಾದ Y S ಪಾಟೀಲ್ ಮತ್ತು ಪಾವಗಡ ಶಾಸಕರಾದ ವೆಂಕಟರಮಣಪ್ಪ ನವರು ಘಟನ ಸ್ಥಳದಿಂದ 10 ಕಿಮೀ ದೂರದಲ್ಲಿರುವ ಬೊಮ್ಮನಹಳ್ಳಿ ಗೆ ಗ್ರಾಮ ವಾಸ್ತವ್ಯಕ್ಕೆ ತಳ್ಳಿರುವುದು ಹಲವು ಅನುಮಾನಸ್ಪದ ಮತ್ತು ಟೀಕೆಗಳಿಗೆ ಗುರಿಯಾಗಿದೆ . ಇಂದಿನ ಈ ಘಟನೆಯು ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿ ಮನಕಲುಕುವಂತಿದ್ದು ಈ ಘಟನೆ ವಿಚಾರವಾಗಿ ಎಲ್ಲರೂ ಕರುಣೆಯಿಂದ ಕಂಬನಿ ಮಿಡಿಯುತ್ತಿದ್ದರೆ . ಆದರೆ ಸ್ಥಳೀಯ DC ಮತ್ತು MLA ಗಳು ಮಾತ್ರ ಈ ವಿಚಾರವನ್ನು ಕೇವಲವಾಗಿ ಪರಿಗಣಿಸಿ , ಬೇರೊಂದು ಕಾರ್ಯರೂಪದ ಬಗ್ಗೆ ಯೋಜನೆ ನಡೆಸಿರುವುದು ” ಇವರಿಗೆ ಜನರ ಮೇಲೆ ಎಷ್ಟು ಕಾಳಜಿ ಇದೇ ಇದು ಎಂದು ತೋರುತ್ತದೆ ” ಎನ್ನುವುದು ಹಲವು ಪ್ರಗತಿಪರ ಚಿಂತಕರ ಅಭಿಪ್ರಾಯವಾಗಿದೆ.
~ ✍️ ಅಗ್ನಿ ಅಜಿತ್