ತುಮಕೂರು: ಪತ್ರಕರ್ತನ ಸೋಗಿನಲ್ಲಿ ತುಮಕೂರು ಪಾಲಿಕೆ ಸಿಬ್ಬಂದಿಗೆ ಹಣಕ್ಕಾಗಿ ಬೇಡಿಕೆಯಿಟ್ಟು, ಬೆದರಿಕೆಯೊಡ್ಡಿದ್ದ ಆರೋಪದಡಿಯಲ್ಲಿ ಬಿಗ್ಬಾಸ್ ಖ್ಯಾತಿಯ ಮಂಜು ಪಾವಗಡ ಸಹೋದರ ಪ್ರದೀಪ್ ಪಾವಗಡ ಹಾಗೂ ಮೂವರು ಯುವತಿಯರು ಸೇರಿದಂತೆ ಒಟ್ಟು ನಾಲ್ವರನ್ನು ತುಮಕೂರು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಪ್ರದೀಪ್ ಪಾವಗಡ ತಾನೊಬ್ಬ ಸತ್ಯ ವಿಸ್ಮಯ ವಾರ ಪತ್ರಿಕೆ ಸಂಪಾದಕ ಎಂದು ಹೇಳಿಕೊಂಡಿದ್ದ ಮತ್ತು ತುಮಕೂರು ಮಹಾನಗರ ಪಾಲಿಕೆ ನಲ್ಮ್ ವಿಭಾಗದ ಸಿಬ್ಬಂದಿ ದೀಪಿಕಾಗೆ ಪರಿಚಯವಾಗಿದ್ದ. ಸಂಘ, ಸಂಸ್ಥೆ ಹೆಸರಲ್ಲಿ 10 ಲಕ್ಷ ಸಾಲ ಪಡೆಯುವ ನೆಪದಲ್ಲಿ ಪಾಲಿಕೆ ಸಿಬ್ಬಂದಿಗೆ ಚಿಕ್ಕದೊಂದು ವ್ಯವಹಾರ ಇಟ್ಟುಕೊಂಡಿದ್ದ . ಈ ವೇಳೆ 10 ಲಕ್ಷ ರೂ. ಸಾಲ ಕೊಡಿಸುವುದಾಗಿ ದೀಪಿಕಾ ಅವರು ಒಪ್ಪಿಕೊಂಡಿದ್ದರು.
10 ಲಕ್ಷ ರೂ. ಸಾಲ ಕೊಡಿಸಲು 4 ಲಕ್ಷ ಕಮಿಷನ್ ಹಣ ಕೊಡಬೇಕೇಂದು ದೀಪಿಕಾ, ಪ್ರದೀಪ್ ಪಾವಗಡಗೆ ಬೇಡಿಕೆ ಇಟ್ಟಿದ್ದರೆಂದೂ ಇದನ್ನೆ ಬಂಡವಾಳ ಮಾಡಿಕೊಂಡ ಪ್ರದೀಪ್, ದೀಪಿಕಾ ಮೊಬೈಲ್ನಲ್ಲಿ ಮಾತನಾಡಿದ್ದ ಆಡಿಯೋವನ್ನು ರೆಕಾರ್ಡ್ ಮಾಡಿಕೊಂಡಿದ್ದ. ಇದೇ ಆಡಿಯೋ ಇಟ್ಟುಕೊಂಡು ಪಾಲಿಕೆ ಸಿಬ್ಬಂದಿ ದೀಪಿಕಾಗೆ 4 ಲಕ್ಷ ಹಣ ಕೊಡುವಂತೆ ಬೇಡಿಕೆ ಇಟ್ಟಿದ್ದ ಇಷ್ಟು ಸಾಲದೇ.
ತನ್ನ ಬಳಿಯಿದ್ದ ಮೂವರು ಯುವತಿಯರನ್ನು ಚೂ ಬಿಟ್ಟು, ” ನಾವು ಆರ್ಟಿಐ ಕಾರ್ಯಕರ್ತರು ನೀವು ಹಣ ಕೊಟ್ಟಿಲ್ಲ ಅಂದ್ರೆ, ನಿಮ್ಮನ್ನ ಕೆಲಸದಿಂದ ವಜಾಗೊಳಿಸುವಂತೆ ಮಾಡುತ್ತೇವೆ ” ಎಂದು 4 ಲಕ್ಷ ಹಣಕ್ಕೆ ಡಿಮ್ಯಾಂಡ್ ಮಾಡಿದ್ದರು. ಹಣ ಕೊಡಲಿಲ್ಲ ಅಂದ್ರೆ ತನ್ನ ಪತ್ರಿಕೆಯಲ್ಲಿ ಸುದ್ದಿ ಬಿತ್ತರಿಸೋದಾಗಿ ಬೆದರಿಕೆ ಕೂಡ ಹಾಕಿದ್ದರು. ಇದೆಲ್ಲ ಮುಗಿಯುವ ನೆಪದಲ್ಲೇ ತನ್ನ ಜೊತೆ ಒಂದು ರಾತ್ರಿ ಕಳೆಯುವಂತೆ ಮಂಚಕ್ಕೂ ಕೂಡ ಕರೆದ್ದು , ಆ ಸಿಬ್ಬಂದಿಗೆ ಬೆದರಿಕೆ ಇಟ್ಟಿರುವ ವಿಷಯ ಬೆಳಕಿಗೆ ಬಂದು ಗಂಭೀರ ಆರೋಪವೊಂದು ಪ್ರದೀಪ್ ಪಾವಗಡ ವಿರುದ್ಧ ಕೇಳಿಬಂದಿದೆ.
ಯಾವಾಗ ” ನಾ ಹಣ ಕೊಡಲ್ಲ ಅಂತ ಸಿಬ್ಬಂದಿ ಪಟ್ಟು ಹಿಡಿದಾಗ ” ಪಾಲಿಕೆ ಕಚೇರಿಯ ಕೊಠಡಿಯಲ್ಲಿ ದೀಪಿಕಾರನ್ನು ಕೂಡಿ ಹಾಕಿ ಹಣ ಕೊಡುವಂತೆ ಬ್ಲಾಕ್ ಮೇಲ್ ಮಾಡುತ್ತಿದ್ದನು ಪಾಲಿಕೆ ಸಿಬ್ಬಂದಿ ನೋಡಿದಾಗ ಘಟನೆ ಬೆಳಕಿಗೆ ಬಂದಿದ್ದು. ತಕ್ಷಣ ಹಣ ವಸೂಲಿಗೆ ಬಂದಿದ್ದ ಪ್ರದೀಪ್ ಪಾವಗಡ ಹಾಗೂ ಆತನ ಜೊತೆಯಿದ್ದ ಮೂವರು ಯುವತಿಯರಿಗೆ ಪಾಲಿಕೆಯ ಮಧ್ಯವರ್ತಿಗಳು ಹಿಗ್ಗಾಮುಗ್ಗಾ ಥಳಿಸಿ ಬಾಯಿಗೆ ಬಂದಂತೆ ನಿಂದಿಸಿ ಚಪ್ಪಲಿಯಿಂದ ಹೊಡೆದು ಮಾನತೆಗೆದು ತದನಂತರ ತುಮಕೂರು ನಗರ ಠಾಣೆಗೆ ದೂರವಾಣಿ ಕರೆಮೂಲಕ ಪೊಲೀಸರಿಗೆ ವಿಷಯ ತಿಳಿಸಿ ನಾಲ್ವರನ್ನು ವಶಕ್ಕೆ ಒಪ್ಪಿಸಿದ್ದಾರೆ. ಸದ್ಯ ಪ್ರದೀಪ್ ಪಾವಗಡ ಹಾಗೂ ಮೂವರು ಯುವತಿಯರನ್ನು ತುಮಕೂರು ನಗರ ಪೊಲೀಸರು ತನಿಖೆಗೆ ಒಳಪಡಿಸಿದ್ದು ಸತ್ಯಾಂಶ ಇನ್ನೂ ಹೊರತೆಗೆಯುವ ಕಾರ್ಯ ಮುಂದುವರಿದಿದೆ.
ವರದಿ : ಏಜೆನ್ಸಿ .
ಫೋಟೋ : ಅಜಿತ್ ಕುಮಾರ್ ಬೆಳ್ಳಿ ಬಟ್ಲು