Category: ಕ್ರೀಡೆ

ಖ್ಯಾತ ಟೆನಿಸ್ ತಾರೆಗೆ ಗಂಟಲು, ಸ್ತನ ಕ್ಯಾನ್ಸರ್ ಪತ್ತೆ

ಇತಿಹಾಸದ ಶ್ರೇಷ್ಠ ಕ್ರೀಡಾಪಟುಗಳಲ್ಲಿ ಒಬ್ಬರಾದ ಟೆನಿಸ್ ದಂತಕಥೆ ಮಾರ್ಟಿನಾ ನವ್ರಾಟಿಲೋವಾ ಅವರಿಗೆ ಗಂಟಲು ಮತ್ತು ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ.18 ಬಾರಿಯ ಗ್ರ್ಯಾಂಡ್ ಸ್ಲಾಮ್ ಸಿಂಗಲ್ಸ್ ಚಾಂಪಿಯನ್ ಜನವರಿಯಲ್ಲಿ ನ್ಯೂಯಾರ್ಕ್‌ ನಲ್ಲಿ ಚಿಕಿತ್ಸೆ ಪ್ರಾರಂಭಿಸಲು ಸಿದ್ಧವಾಗಿದ್ದಾರೆ. ತಾನು ಪಡೆದಿರುವ ಎಲ್ಲದರೊಂದಿಗೆ ರೋಗದ…

ಟಿ20 ಪಂದ್ಯದಲ್ಲಿ ಭಾರತ ತಂಡಕ್ಕೆ ರೋಚಕ ಗೆಲುವು

ಭಾರತೀಯ ಬೌಲರ್ಸ್ ಹೋರಾಟ, ಶ್ರೀಲಂಕಾ ನಾಯಕ ದಸೂನ್ ಶನಕ ಬ್ಯಾಟಿಂಗ್ ಅಂತಿಮ ಹಂತದಲ್ಲಿ ಪಂದ್ಯವನ್ನು ತೀವ್ರ ರೋಚಕತೆಗೆ ಕೊಂಡೊಯ್ದಿತ್ತು. ಅಂತಿಮ ಓವರ್ ಮತ್ತಷ್ಟು ಕುತೂಹಲ ಕೆರಳಿಸಿತು. ಅಂತಿಮ ಹಂತದಲ್ಲಿ ಲಂಕಾದ ಕರುಣಾರತ್ನೆ ಸಿಡಿಸಿ ಎರಡು ಸಿಕ್ಸರ್ ಪಂದ್ಯದ ಗತಿ ಬದಲಿಸುವ ಸೂಚನೆ ನೀಡಿತ್ತು. ಆದರೆ ಕೊನೆಯ ಎಸೆತದಲ್ಲಿ ಭಾರತ 2 ರನ್ ಗೆಲುವು ದಾಖಲಿಸಿತು.  ಭಾರತದ ಬೌಲರ್ಸ್ ಪರಾಕ್ರಮದಿಂದ ಲಂಕಾ ತಂಡವನ್ನು160 ರನ್‌ಗೆ ಕಟ್ಟಿ ಹಾಕಲಾಯಿತು. 163 ರನ್ ಟಾರ್ಗೆಟ್ ಚೇಸ್ ಮಾಡಲು ಶ್ರೀಲಂಕಾ ಸಜ್ಜಾಗಿತ್ತು. ಡ್ಯೂ ಫ್ಯಾಕ್ಟರ್ ಲಾಭ ಕೂಡ ಲಂಕಾಗಿತ್ತು. ಇದೇ ಕಾರಣಕ್ಕೆ ಚೇಸಿಂಗ್ ಆಯ್ಕೆ ಮಾಡಿಕೊಂಡ ಶ್ರೀಲಂಕಾ ಎಲ್ಲಾ ಲೆಕ್ಕಾಚಾರದೊಂದಿಗೆ ಕಣಕ್ಕಿಳಿದಿತ್ತು. ಆದರೆ ಶಿವಂ ಮಾವಿ ಬೆಂಕಿ ದಾಳಿಗೆ ಶ್ರೀಲಂಕಾ ಆರಂಭದಲ್ಲೇ ಪಥುಮ್ ನಿಸಂಕಾ ವಿಕೆಟ್ ಕಳೆದುಕೊಂಡಿತು. ನಿಸಂಕ 1 ರನ್ ಸಿಡಿಸಿ ಔಟಾದರು. ಇದರ ಬೆನ್ನಲ್ಲೇ ಧನಂಜಯ ಡಿಸಿಲ್ವ ವಿಕೆಟ್ ಪತನಗೊಂಡಿತು. ಧನಂಜಯ 8 ರನ್ ಸಿಡಿಸಿ ಔಟಾದರು. ಕುಸಾಲ್ ಮೆಂಡೀಸ್ ಹೋರಾಟ ಮುಂದುವರಿಸಿದರು. ಇತ್ತ ಚಾರಿತ್ ಅಸಲಂಕಾ ಉತ್ತಮ ಸಾಥ್ ನೀಡಿದರು. ಬಹುಬೇಗನೆ 2 ವಿಕೆಟ್ ಕಳೆದುಕೊಂಡ ಲಂಕಾ ತಂಡಕ್ಕೆ ಮೆಂಡೀಸ್ ಹಾಗೂ ಅಸಲಂಕಾ ನೆರವಾದರು. ಆದರೆ ಚಾರಿತ್ ಅಸಲಂಕ 12 ರನ್ ಸಿಡಿಸಿ ಔಟಾದರು.ಹೋರಾಟ ನೀಡಿದ ಕುಸಾಲ್ ಮೆಂಡೀಸ್ 28 ರನ್ ಸಿಡಿಸಿ ನಿರ್ಗಮಿಸಿದರು. ಭಾನುಕ ರಾಜಪಕ್ಸ 10 ರನ್ ಸಿಡಿಸಿ ಔಟಾದರು. ಇತ್ತ ನಾಯಕ ದಸೂನ್ ಶನಕ ಕುಸಿದ ತಂಡಕ್ಕೆ ಆಸರೆಯಾದರು. ತಂಡದ ಜವಾಬ್ದಾರಿ ಹೊತ್ತುಕೊಂಡ ನಾಯಕ, ಹೋರಾಟ ಮುಂದುವರಿಸಿದರು. ನಾಯಕನಿಗೆ ವಾನಿಂಡು ಹಸರಂಗ ಜೊತೆಯಾದರು. ಇವರಿಬ್ಬರ ಜೊತೆಯಾಟ ಟೀಂ ಇಂಡಿಯಾ ಆತಂಕ ಹೆಚ್ಚಿಸಿತ್ತು. ಕೇವಲ 10 ಎಸೆತದಲ್ಲಿ 21 ರನ್ ಸಿಡಿಸಿದ ವಾನಿಂಡು ವಿಕೆಟ್ ಪತನ ಪಂದ್ಯಕ್ಕೆ ಮಹತ್ವದ ತಿರುವು ನೀಡಿತು. ಆದರೆ ದಸೂನ ಶನಕ ಬ್ಯಾಟಿಂಗ್ ಕ್ಷಣಕ್ಷಣಕ್ಕೂ ಪಂದ್ಯಕ್ಕೆ ರೋಚಕ ತಿರುವು ನೀಡಲು ಆರಂಭಿಸಿತು. ಚಮಿಕಾ ಕರುಣರತ್ನೆ ಜೊತೆ ಸೇರಿದ ದಸೂನ್ ಶನಕ ಹೋರಾಟ ಭಾರತದ ತಲೆನೋವು ಹೆಚ್ಚಿಸಿತು. 27 ಎಸೆತದಲ್ಲಿ 45 ರನ್ ಚಚ್ಚಿದ ದಸೂನ್ ಶನಕ ಭಾರತಕ್ಕೆ ಅಪಾಯದ ಸೂಚನೆ ನೀಡಿದರು. ಆದರೆ ಉಮ್ರಾನ್ ಮಲಿಕ್ ದಾಳಿಗೆ ಶನಕ ವಿಕೆಟ್ ಪತನಗೊಂಡಿತು. ಈ ವಿಕೆಟ್ ಪತನದೊಂದಿಗೆ ಭಾರತ ಪಂದ್ಯದ ಮೇಲೆ  ಹಿಡಿತ ಸಾಧಿಸಲು ಆರಂಭಿಸಿತು. ಇದರೊಂದಿಗೆ ಲಂಕಾ ಗೆಲುವಿಗೆ ಅಂತಿಮ 18 ಎಸೆತದಲ್ಲಿ 32 ರನ್ ಅವಶ್ಯಕತೆ ಇತ್ತು.

ಮಹೇಂದ್ರ ಸಿಂಗ್ ಧೋನಿ ಪುತ್ರಿಗೆ ವಿಶೇಷ ಗಿಫ್ಟ್ ಕಳಿಸಿಕೊಟ್ಟ ಲಿಯೋನೆಲ್ ಮೆಸ್ಸಿ

ಭಾರತದ ಫುಟ್ಬಾಲ್ ದಂತಕಥೆ ಮಹೇಂದ್ರ ಸಿಂಗ್ ಧೋನಿ ಓರ್ವ ಫುಟ್ಬಾಲ್ ಪ್ರೇಮಿ ಎನ್ನುವುದೇನು ರಹಸ್ಯವಾಗಿ ಉಳಿದಿಲ್ಲ. ಇದೀಗ ತಂದೆಯಂತೆ ಎಂ ಎಸ್ ಧೋನಿ ಪುತ್ರಿ ಝಿವಾ ಧೋನಿ ಕೂಡಾ ಫುಟ್ಬಾಲ್‌ ಕ್ರೀಡೆಯನ್ನು ಇಷ್ಟಪಡುತ್ತಾರೆ. 7 ವರ್ಷದ ಝಿವಾ ಧೋನಿ ಕೂಡಾ ಅರ್ಜೆಂಟೀನಾ…

ರಿಷಬ್ ಪಂತ್ ಸ್ಥಿತಿ ಗಂಭೀರ; ಡೆಹ್ರಾಡೂನ್ ಆಸ್ಪತ್ರೆಗೆ ಶಿಫ್ಟ್

ಡೆಹ್ರಾಡೂನ್: ಭೀಕರ ಕಾರು ಅಪಘಾತದಲ್ಲಿ ಗಾಯಗೊಂಡಿರುವ ಕ್ರಿಕೆಟಿಗ ರಿಷಬ್ ಪಂತ್ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ದೆಹಲಿ ಏಮ್ಸ್ ನಿಂದ ಡೆಹ್ರಾಡೂನ್ ಆಸ್ಪತ್ರೆಗೆ ಅವರನ್ನು ಶಿಫ್ಟ್ ಮಾಡಲಾಗಿದೆ. ಈ ಬಗ್ಗೆ ಹರಿದ್ವಾರ ಎಸ್ ಪಿ ಕಿಶೋರ್ ಮಾಹಿತಿ ನೀಡಿದ್ದು, ವೈದ್ಯರ ಸೂಚನೆ ಮೇರೆಗೆ ರಿಷಬ್…

3 ಬಾರಿ ಫಿಫಾ ವಿಶ್ವಕಪ್ ಗೆದ್ದ ಫುಟ್ಬಾಲ್ ದಂತಕತೆ ಪೀಲೆ ನಿಧನ

ಬ್ರೆಜಿಲ್ ಫುಟ್ಬಾಲ್ ದಂತಕಥೆ ಪೀಲೆ(82) ಶುಕ್ರವಾರ ನಿಧನರಾಗಿದ್ದಾರೆ. ಬ್ರೆಜಿಲ್ ಫುಟ್ಬಾಲ್ ದಿಗ್ಗಜ ಪೀಲೆ ಮೂರು ಬಾರಿ ಫಿಫಾ ವಿಶ್ವಕಪ್ ಗೆದ್ದ ಏಕೈಕ ಆಟಗಾರರಾಗಿದ್ದ ಪೀಲೆ ಫುಟ್ಬಾಲ್ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿದ್ದರು. ಪೀಲೆ ನಿಧನಕ್ಕೆ ವಿಶ್ವದ ಗಣ್ಯರು ಸಂತಾಪ ಸೂಚಿಸಿದ್ದಾರೆ.  …

ಅಪಘಾತದಲ್ಲಿ ಖ್ಯಾತ ಕ್ರಿಕೆಟಿಗ ರಿಷಬ್ ಪಂತ್ ಗಂಭೀರ; ಆಸ್ಪತ್ರೆಗೆ ದಾಖಲು

ನವದೆಹಲಿ: ಭಾರತೀಯ ಕ್ರಿಕೆಟಿಗ ರಿಷಬ್ ಪಂತ್ ಅವರ ಕಾರು ಗುರುವಾರ ಅಪಘಾತಕ್ಕೀಡಾಗಿದೆ. ದೆಹಲಿಯಿಂದ ಮನೆಗೆ ಮರಳುತ್ತಿದ್ದಾಗ ರೂರ್ಕಿ ಬಳಿ ಅವರ ಕಾರು ಅಪಘಾತಕ್ಕೀಡಾಯಿತು. ರಿಷಬ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಖ್ಯಾತ ಕ್ರಿಕೆಟಿಗ ರಿಷಬ್ ಪಂತ್ ಪ್ರಯಾಣಿಸುತ್ತಿದ್ದ ಕಾರ್ ಗೆ ಬೆಂಕಿ ತಗುಲಿ ಸಂಪೂರ್ಣ ಭಸ್ಮವಾಗಿದೆ.…

ಟಿ20 ಕ್ರಿಕೆಟ್ ನಿಂದ ವಿರಾಟ್ ಕೊಹ್ಲಿ ದೂರ

ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್ ನಿಂದ ವಿರಾಮ ತೆಗೆದುಕೊಳ್ಳುತ್ತಾರೆ. ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ಮುಂದುವರಿಯುತ್ತಾರೆ ಎಂದು ಹೇಳಲಾಗಿದೆ. ಶ್ರೀಲಂಕಾ ವಿರುದ್ಧದ ತವರಿನಲ್ಲಿ ನಡೆಯಲಿರುವ ಟಿ20 ಸರಣಿಗೆ ಭಾರತ ತಂಡವನ್ನು ಪ್ರಕಟಿಸುವ ಮುನ್ನ ಆಘಾತಕಾರಿ ಸುದ್ದಿ ಏನೆಂದರೆ, ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ…