Spread the love

ಪಾವಗಡ :ಇಂದು ದೇಶದಾದ್ಯಂತ ಸೂರ್ಯ ಗ್ರಹಣದ ಭೀತಿಯಿಂದ ಜನರು ಅನೇಕ ಆಚರ ವಿಚಾರಗಳಿಗೆ ಹೊತ್ತು ಕೊಡುತ್ತಿದ್ದು ಇದೀಗ ಗ್ರಹಣ ಪದ್ಧತಿ ಎನ್ನುವುದು ಒಂದು ನೈಸರ್ಗಿಕವಾಗಿ ಪ್ರಕೃತಿಯೆಂಬ ಸೌರಮಂಡಲದಲ್ಲಿ ಬದಲಾಗುವಂತಹ ಒಂದು ಏರುಪೇರು ಅಷ್ಟೇ ವಿನಹ ಬೇರೆ ಯಾವ ಭಯ ಭೀತಿ ಉಂಟುಮಾಡುವಂತಹ ಶಕ್ತಿ ಇದಕ್ಕೆಲ್ಲ ಎಂದು ಪಾವಗಡ ತಾಲೂಕಿನ ಅಂಬೇಡ್ಕರ್ ಪ್ರತಿಮೆಯ ಎದುರು “ಪ್ರಗತಿಪರ ಸಂಘಟನೆಗಳ ಒಕ್ಕೂಟ” ದಿಂದ ” ಮೌರ್ಯತೆಯಿಂದ ಅರವಿ ನಡೆಗೆ” ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು , ಕಾರ್ಯಕ್ರಮದ  ಅತಿಥಿಯಾಗಿದ್ದ ಪ್ರೋ. ಡಾ: ಲಿಂಗಣ್ಣ ಜಂಗಮರಹಳ್ಳಿ ಮಾತನಾಡಿ ” ದೇಶದಾದ್ಯಂತ ಇಂದು ಪ್ರಾಕೃತಿಕ ವೈಚಾರ್ಯ ನಡೆಯುತ್ತಿದ್ದು ಈ ಸಂದರ್ಭದಲ್ಲಿ ದಲಿತ ಪರ, ಮಾನವ ಪರ, ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಈ ಕಾರ್ಯಕ್ರಮ ಆಯೋಜನೆ ಮಾಡಿದ್ದು ಈ ಮೂಲಕ ದೇಶದಲ್ಲಿ ಮನವಾದಿಗಳು ಬಿತ್ತಿದ್ದಂತ ಮೌಢ್ಯದ ವಿರುದ್ಧ ದಂಗೆ ಸಾರುವಂತ ಒಂದು ಸಾಂಸ್ಕೃತಿಕ ಯುದ್ಧವನ್ನು ಮಾಡುವಂತಹ ಕೆಲಸ ಮಾಡುತಿದ್ದೇವೆ. ಮುಖ್ಯವಾದ ವಿಚಾರವೇನೆಂದರೆ ಸೂರ್ಯ ಮತ್ತು ಚಂದ್ರ ಗ್ರಹಣ ಎನ್ನುವಂತಹದ್ದು ಸೂರ್ಯ, ಚಂದ್ರ, ಭೂಮಿ, ಗ್ರಹತಾರೆಗಳ ಮತ್ತು ನಕ್ಷತ್ರ ಗಳ ಚಲನೆಯಿಂದ ಉಂಟಾಗುವಂತಹ ಒಂದು ವೈಚಿತ್ರ . ಇದರಿಂದ ಮನುಕುಲ ಮತ್ತು ಸಕಲ ಜೀವಿಗಳಿಗೆ ಯಾವುದೇ ತೊಂದರೆಗಳು ಏರ್ಪಡುವುದಿಲ್ಲ ಎಂಬುದು ವೈಜ್ಞಾನಿಕ ಸತ್ಯ ಆದರೆ ಸಾವಿರ ವರ್ಷಗಳಿಂದ ಈ ದೇಶದ ಆಡಳಿತವನ್ನು ಗುತ್ತಿಯಾಗಿ ಮಾಡಿಕೊಂಡ ಮನುವಾದಿಗಳು ಮಾಡಿರುವಂತಹದ್ದು ಏನೆಂದರೆ ಅದು ಮೌಢ್ಯತೆಯ  ಒಂದು ಉನ್ನಾರ . ಅದು ಈ ದೇಶದ Sc , St , Obc ಸಮುದಾಯಗಳನ್ನು, ಮಹಿಳೆಯರನ್ನು, ಮಕ್ಕಳನ್ನು, ಇಂತಹ ಗ್ರಹಣ ಎಂಬ ಕಪಾಲಕಲ್ಪಿತ ಸುಳ್ಳುಗಳಿಂದ ನಮ್ಮ ಮೇಲೆ ಭಯೋತ್ಪಾದನೆ ಎಸಗಲಾಗಿದೆ. ಇಂತಹ ಕೃತ್ಯಗಳಿಗೆ ಕೇಂದ್ರಗಳಾಗಿ ಮಠಗಳು, ಮಂದಿರಗಳು, ಮಸೀದಿಗಳು , ಇವುಗಳು ದೇಶದಲ್ಲಿನ ಸಹಬಾಳ್ವೆ ಮಾನವೀಯತೆಯನ್ನು ಹಾಳು ಮಾಡುತ್ತಿವೆ . ಅಲ್ಲದೆ ಗ್ರಹಣ ಮೌಢ್ಯವನ್ನೇ ಸಂಸ್ಕೃತ ಆಚರಣೆಯ ಭಯೋತ್ಪಾದನೆಯ ಆಯುಧಗಳನ್ನಾಗಿ ಮಾಡಿಕೊಂಡು ಜನರಿಗೆ ಮಂಕುಬೂದಿ ಎರಚಿ ಈ ದೇಶವನ್ನು ಪರಿಕೀರ ಆಳ್ವಿಕೆಗೆ ನೀಡಲಾಗಿದೆ . ಈ ಕೃತಿಗಳಿಂದ ಈ ದೇಶದ ಮೂಲ ನಿವಾಸಿಗಳ ಅಸ್ತಿತ್ವವೇ ಹಾಳಾಗಿ ಹೋಗಿದೆ ಇವುಗಳನ್ನು ಮರು ಸ್ಥಾಪಿಸಲೆ ನಾವು ಅರಿವು ಮೂಡಿಸಲು ಮುಂದಾಗಿದ್ದೇವೆ ಎಂದು ಹೇಳಿದರು.

ಇನ್ನು ಇದೆ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ನೂರು ಅತಿಥಿಯಾಗಿದ್ದ ಮಹಾದಿಗ ಮೀಸಲಾತಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷರು ಆದಂತಹ ಕನ್ನಮೇಡಿ ಕೃಷ್ಣಮೂರ್ತಿ ರವರು ಮಾತನಾಡುತ್ತಾ ” ಮೂಡ್ಯತೆ ವಿರುದ್ಧ ಜನರಿಗೆ ಅರಿವು ಮೂಡಿಸಲು ಈ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿದ್ದು ಇಲ್ಲಿವರೆಗೂ ಅನೇಕ ವೈಚಾರಿಕ ಆಚರಣೆಗಳಿಂದ ನಮ್ಮ ಸಮುದಾಯವನ್ನು ಮೌಢ್ಯತೆಯ ಅಂಧಕಾರದಲ್ಲಿ ಮುಳುಗಿಸಿದ್ದು ಅವರನ್ನು ಅರಿವಿನಡಿಗೆ ಕರೆ ತರಲು ಈ ಕಾರ್ಯಕ್ರಮದ ಉದ್ದೇಶವಾಗಿದೆ . ನಮ್ಮ ಜನರಲ್ಲಿ ವೈಜ್ಞಾನಿಕ ಚಿಂತೆಯನ್ನು ಬಿಟ್ಟು ವಾಸ್ತವವನ್ನು ಅವರಿಗೆ ತಿಳಿಸಿ ಸತ್ಯದ ಬದುಕು ಕಟ್ಟಿಕೊಡುವುದೆ ನಮ್ಮ ಆಶಯವಾಗಿದೆ ಎಂದು ನೋಡಿದರೆ.

ಇನ್ನೋರ್ವ ಅತಿಥಿಯಾದಂತ ಮಾದಿಗ ದಂಡೋರ ಜಿಲ್ಲಾ ಅಧ್ಯಕ್ಷರಾದಂತಹ ವಳ್ಳೂರು ನಾಗೇಶ್ ರವರು ಮಾತನಾಡಿ ” ಜನರನ್ನು ಬದಲಾಯಿಸುವ ನಿಟ್ಟಿನಲ್ಲಿ ನಾವು ಮನುವಾದಿಗಳ ಸುಳ್ಳು ಶಾಸ್ತ್ರಗಳನ್ನು ಕಟುವಾಗಿ ಟೀಕಿಸಿ ಅವುಗಳ ನೈಜತೆಯನ್ನು ಬಯಲು ಮಾಡಿ ಈ ಸಮಾಜಕ್ಕೆ ಸತ್ಯದ ಸತ್ಯದ ಆದಿ ತರುವುದೇ ನಮ್ಮ ಈ ಉದ್ದೇಶ ಎಂದರು.

ಇನ್ನೂ ಮುಖಂಡರಾದಂತಹ ಬಹುಜನ ಸಮಾಜ ಪಾರ್ಟಿಯ ತಾಲೂಕು ಪ್ರಧಾನ ಕಾರ್ಯದರ್ಶಿಯಾದ ಚಿನ್ನಮ್ಮನಹಳ್ಳಿ ವೆಂಕಟರಮಣ ಮಾತನಾಡಿ ” ಈ ಮೌಢ್ಯತೆ ಗಳಿಂದ ಜಾತಿ ವ್ಯವಸ್ಥೆ ನಿರ್ಮಾಣವಾಗಿರುತ್ತದೆ . ಇವುಗಳನ್ನು ನಾಶ ಮಾಡದೆ ಹೋದರೆ ದೇಶ ವಿಶ್ವದ ಎದುರು ತಲೆತಗ್ಗಿಸುವಂತಹ ಪರಿಸ್ಥಿತಿ ಉಂಟಾಗುತ್ತದೆ. ಆದಕಾರಣ ದೇಶದಲ್ಲಿ ಸಮಾನತೆ ಮತ್ತು ಸೋದರತೆಯನ್ನು ಕಟ್ಟಲು ಈ ರೀತಿ ಒಂದು ಪ್ರಯತ್ನಕ್ಕೆ ಕೈ ಹಾಕಿದ್ದೇವೆ ಎಂದು ಆಶಯು ವ್ಯಕ್ತಪಡಿಸಿದ್ದರು.

ಕೊನೆಯದಾಗಿ ಕಾರ್ಯಕ್ರಮದ ಆಯೋಜಕರಾದಂತಹ ಸಿಪಿಐ(ಎಂ) ನ ಕಾರ್ಯಕರ್ತರಾದ ಶಿವಕುಮಾರ್ ಬುಡಸನಹಳ್ಳಿ ಮಾತನಾಡಿ ” ಮೌಢ್ಯತೆಯ ಈ ದೇಶ ಅಂಟಿಕೊಂಡ ಮಾರಕವಾಗಿದೆ ಇದನ್ನು ಮಾನವೀಯತೆ ಎಂಬ ನೀರೇರಚಿ ತೊಳೆಯದೇ ಹೊರೆತು ಇದು ಈ ದೇಶವನ್ನು ಗೆದ್ದಲಿನಂತೆ ತಿಂದು ಹಾಳು ಮಾಡುತ್ತಿದೆ. ಆ ಕಾರಣ ದೇಶ ಕಟ್ಟುವ ನಿಟ್ಟಿನಲ್ಲಿ ನಾವು ಮೌಢ್ಯತೆಯನ್ನು ನಾಶ ಮಾಡಲು ಹೊರಟಿದ್ದೇವೆ” ಎಂದು ಕಾರ್ಯಕ್ರಮದ ಒಟ್ಟಾರೆ ಉದ್ದೇಶವನ್ನು ಮಾಧ್ಯಮಗಳಿಗೆ ತಿಳಿ ಪಡಿಸಿದ್ದರು. ಇದೆ ವೇಳೆ ಗ್ರಹಣದ ಸಮಯದಲ್ಲಿ ಪುರೋಹಿತರು ಹೇಳಿದಂತಹ ನಿಯಮಾನುಸಾರಗಳ ವಿರುದ್ಧವಾಗಿ ಗ್ರಹಣ ಸಂಭವಿಸುವ ವೇಳೆಯೆ ಮಾಂಸದ ಉಪಹಾರವನ್ನು ಸರಪಂತಿಯಾಗಿ ಸೇವಿಸಿ ವೈಜ್ಞಾನಿಕ ಚಟುವಟಿಕೆಗಳನ್ನು ಮೆರೆದರು.

ಇನ್ನು ಈ ಕಾರ್ಯಕ್ರಮದ ವೇಳೆ KDSS ತಾಲೂಕು ಸಂಚಲಕರಾದ ಪೆದ್ದಣ್ಣ, KDSS ತಾಲೂಕು ಅಧ್ಯಕ್ಷರಾದಂತಹ ನರಸಿಂಹಪ್ಪ ಮೀನಕುಂಟೆನಹಳ್ಳಿ , ಚಿನ್ನಮ್ಮನಹಳ್ಳಿಯ ಮುರುಳಿ, ಪಳವಳ್ಳಿ ಮೂರ್ತಿ , ನಲಿಗನಹಳ್ಳಿ ಮಂಜುನಾಥ್ ಸೇರಿದಂತೆ ಹಲವರು ಹಾಜರಿದ್ದರು.


Spread the love