Spread the love

ಸ್ಟ್ರೇಲಿಯಾ ತಂಡದಲ್ಲಿ ಇತ್ತೀಚೆಗೆ ಸೇರ್ಪಡೆಯಾಗಿ ಸ್ಟಾರ್ ಆಲ್ ರೌಂಡರ್ ಆಗಿ ಮಿಂಚುತ್ತಿರುವ 23 ವಯಸ್ಸಿನ ಕ್ಯಾಮೆರಾನ್ ಗ್ರೀನ್ ಇಂದು ನಡೆದ ಐಪಿಎಲ್ ಹರಾಜಿನಲ್ಲಿ ಬರೋಬ್ಬರಿ 17.5 ಕೋಟಿ ರೂಪಾಯಿಗೆ ಮುಂಬೈ ಇಂಡಿಯನ್ಸ್ ಪಾಲಾಗಿದ್ದಾರೆ.

ಇದಕ್ಕೂ ಮುಂಚೆ ಇಂಗ್ಲೆಂಡ್ ನ ಸ್ಯಾಮ್ ಕರನ್ ಅವರನ್ನು 18.5 ಕೋಟಿ ರೂಪಾಯಿ ಗೆ ಪಂಜಾಬ್ ಪ್ರಾಂಚೈಸಿ ಖರೀದಿಸಿತ್ತು.

ಈ ಮೂಲಕ ಸ್ಯಾಮ್ ಕರನ್ ಐಪಿಎಲ್ ಇತಿಹಾಸದಲ್ಲೇ ಅತಿಹೆಚ್ಚು ಮೊತ್ತಕ್ಕೆ ಹರಾಜಾದ ಆಟಗಾರರಾಗಿದ್ದಾರೆ.

ಕಳೆದ ಬಾರಿಯ ಕಳಪೆ ಪ್ರದರ್ಶನದಿಂದ ಅಭಿಮಾನಿಗಳಲ್ಲಿ ಬೇಸರ ಮೂಡಿಸಿರುವ ಮುಂಬೈ ಇಂಡಿಯನ್ಸ್ ಯುವ ಪ್ರತಿಭೆಗಳಿಗೆ ಅವಕಾಶ ನೀಡುತ್ತಿದೆ.

ಇಂಗ್ಲೆಂಡ್ ನ ಯುವ ಬ್ಯಾಟ್ಸ್ಮನ್ ಹ್ಯಾರಿ ಬ್ರೂಕ್ ಕೂಡ ಈಗಾಗಲೇ 11.25 ಕೋಟಿ ರೂಪಾಯಿಗೆ ಹರಾಜಾಗಿದ್ದು, ಹೈದ್ರಾಬಾದ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಮತ್ತೊಂದೆಡೆ ವೆಸ್ಟ್ ಇಂಡೀಸ್ ನ ಸ್ಪೋಟಕ ಬ್ಯಾಟ್ಸ್‌ ಮನ್ ವಿಕೆಟ್ ಕೀಪರ್, ನಿಕೋಲಸ್ ಪೂರನ್ 16 ಕೋಟಿ ರೂಪಾಯಿಗೆ ಲಕ್ನೋ ಸೂಪರ್ ಜೆಂಟ್ಸ್ ತಂಡದ ಪಾಲಾಗಿದ್ದಾರೆ.


Spread the love

By admin