Spread the love

ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಇಬ್ಬರು ಬಲಿಷ್ಠ ಬ್ಯಾಟ್ಸ್‌ಮನ್‌ ಗಳನ್ನು ಸನ್ ರೈಸರ್ಸ್ ಹೈದರಾಬಾದ್ ಪ್ರಾಂಚೈಸಿ ಖರೀದಿ ಮಾಡಿದೆ. ಕಳೆದ ಬಾರಿ ಪಂಜಾಬ್ ಕಿಂಗ್ಸ್ ಪರ ಆಟವಾಡಿದ್ದ ಕನ್ನಡಿಗ ಮಯಾಂಕ್ ಅಗರ್ವಾಲ್ ಅವರನ್ನು 8.25 ಕೋಟಿ ರೂಪಾಯಿಗೆ ಖರೀದಿ ಮಾಡಿದರೆ ಇನ್ನೂ ಇತ್ತೀಚಿಗೆ ಇಂಗ್ಲೆಂಡ್ ತಂಡದಲ್ಲಿ ಹೊಸ ಭರವಸೆ ಮೂಡಿಸಿರುವ ಯುವ ಕ್ರಿಕೆಟಿಗ ಹ್ಯಾರಿ ಬ್ರೂಕ್ ಅವರನ್ನು ಬರೋಬ್ಬರಿ 13.25 ಕೋಟಿ ರೂಪಾಯಿಗೆ ಖರೀದಿ ಮಾಡಿದ್ದು, ಹೈದರಾಬಾದ್ ತಂಡದ ಬ್ಯಾಟಿಂಗ್ ನಲ್ಲಿ ಆನೆ ಬಲ ಬಂದಂತಾಗಿದೆ.

 

ಇಂಗ್ಲೆಂಡ್ ಹಾಗೂ ಪಾಕಿಸ್ತಾನ ಹಾಗೂ ನಡುವಣ ಟೆಸ್ಟ್ ಕ್ರಿಕೆಟ್‌ ನಲ್ಲಿ ಹ್ರಾರಿ ಬ್ರೂಕ್ ಬೌಂಡರಿ ಸಿಕ್ಸರ್ ಗಳನ್ನು ಸಿಡಿಸುವ ಮೂಲಕ ಟೆಸ್ಟ್ ಕ್ರಿಕೆಟ್ ನಲ್ಲಿ ಹೀಗೂ ಬ್ಯಾಟಿಂಗ್ ಮಾಡಬಹುದು ಎಂದು ತೋರಿಸಿದ್ದಾರೆ ಗ್ಲೇನ್ ಫಿಲಿಪ್ಸ್, ರಾಹುಲ್ ತ್ರಿಪಾಠಿ, ಅಭಿಷೇಕ್ ಶರ್ಮ, ಹಾಗೂ ಹೈಡೆನ್ ಮಾರ್ಕ್ ರಮ್ ರಂತ ದೈತ್ಯ ಬ್ಯಾಟ್ಸ್‌ಮನ್‌ ಗಳನ್ನು ಹೊಂದಿರುವ ಹೈದರಾಬಾದ್ ತಂಡಕ್ಕೆ ಇದೀಗ ಈ ಇಬ್ಬರು ಸೇರ್ಪಡೆಯಾಗಿದ್ದಾರೆ.


Spread the love

By admin