Spread the love

ವಾಷಿಂಗ್ಟನ್: ಅಕ್ರಮವಾಗಿ ಗಡಿ ದಾಟಲು ಯತ್ನಿಸುತ್ತಿದ್ದ ಗುಜರಾತ್‌ನ ವ್ಯಕ್ತಿಯೊಬ್ಬರು ಅಮೆರಿಕ-ಮೆಕ್ಸಿಕೋ ಗಡಿ ಗೋಡೆಯಿಂದ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.

ಅಮೆರಿಕದ ಮಾಧ್ಯಮಗಳ ವರದಿಗಳ ಪ್ರಕಾರ, ವ್ಯಕ್ತಿಯನ್ನು ಗಾಂಧಿನಗರ ಜಿಲ್ಲೆಯ ಕಲೋಲ್ ತಾಲೂಕಿನ ನಿವಾಸಿ ಬ್ರಿಜ್ಕುಮಾರ್ ಯಾದವ್ ಎಂದು ಗುರುತಿಸಲಾಗಿದೆ.

 

ಬ್ರಿಜ್‌ಕುಮಾರ್‌ ಅಮೆರಿಕಕ್ಕೆ ಅಕ್ರಮವಾಗಿ ಪ್ರವೇಶಿಸುವ ಯತ್ನದಲ್ಲಿ ಅಮೆರಿಕ-ಮೆಕ್ಸಿಕೊ ಗಡಿ ಗೋಡೆಯಿಂದ ಬಿದ್ದು ಮೃತಪಟ್ಟರೆ, ಅವರ ಪತ್ನಿ ಮತ್ತು ಮೂರು ವರ್ಷದ ಮಗ ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದಾರೆ. ಮೂವರೂ ಸಾಕಷ್ಟು ಎತ್ತರದಿಂದ ಕೆಳಕ್ಕೆ ಬಿದ್ದಿರುವುದಾಗಿ ವರದಿಯಾಗಿದೆ. ಹೆಂಡತಿ ಅಮೆರಿಕದ ಬದಿಯಲ್ಲಿ ಬಿದ್ದರೆ, ಅವರ ಮಗ ಮೆಕ್ಸಿಕನ್ ಬದಿಯಲ್ಲಿ ಬಿದ್ದಿದ್ದಾನೆ.

ಬ್ರಿಜ್‌ಕುಮಾರ್ ಗುಜರಾತ್ ಕೈಗಾರಿಕಾ ಅಭಿವೃದ್ಧಿ ನಿಗಮದ ಕಲೋಲ್ ಘಟಕದ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಈ ಘಟನೆಯ ಬಗ್ಗೆ ಗುಜರಾತ್ ಅಪರಾಧ ತನಿಖಾ ಇಲಾಖೆ (ಸಿಐಡಿ) ತನಿಖೆ ಆರಂಭಿಸಿದೆ.

“ಮೃತ ವ್ಯಕ್ತಿ ಉತ್ತರ ಪ್ರದೇಶ ಅಥವಾ ದೆಹಲಿ ಮೂಲದವನಾಗಿದ್ದು, ತನ್ನ ಕುಟುಂಬದೊಂದಿಗೆ ಕಲೋಲ್‌ನಲ್ಲಿ ನೆಲೆಸಿದ್ದ, ಇವರ ಕುಟುಂಬವನ್ನು ಪತ್ತೆಹಚ್ಚಲು ನಾವು ತಂಡವನ್ನು ರಚಿಸಿದ್ದೇವೆ. ಸದ್ಯಕ್ಕೆ, ಅವರ ಕುಟುಂಬವು ಯಾವುದೇ ಪೊಲೀಸರನ್ನು ಸಂಪರ್ಕಿಸಿಲ್ಲ. ಯಾರಿಗಾದರೂ ತಿಳಿದಿದ್ದರೆ


Spread the love

By admin