Spread the love

ಮೋಟಾರ್‌ ಸೈಕಲ್ ಮತ್ತು ಎಸ್‌ಯುವಿ ಪರಸ್ಪರ ಡಿಕ್ಕಿ ಹೊಡೆದ ನಂತರ ಮೋಟಾರ್‌ ಸೈಕ್ಲಿಸ್ಟ್ ಎಸ್‌ಯುವಿಯ ಛಾವಣಿಯ ಮೇಲೆ ಹಾರಿ ಬಿದ್ದ ಅಪಘಾತ ಪ್ರಕರಣ ದಕ್ಷಿಣ ಚೀನಾದಲ್ಲಿ ನಡೆದಿದೆ.

ಡಿಸೆಂಬರ್ 20 ರಂದು ನಡೆದಿರುವ ಘಟನೆಯ ವೀಡಿಯೊದಲ್ಲಿ, ಕಾರು ಬಲ ತಿರುವು ಮಾಡುತ್ತಿದ್ದಾಗ ಮೋಟಾರ್ ಬೈಕ್ ಬಂದು ಎಸ್‌ಯುವಿಯ ಬಲ ಬಾಗಿಲಿಗೆ ಬಡಿದಿದೆ.

ಮೋಟಾರ್ ಬೈಕ್ ತಕ್ಷಣವೇ ಉರುಳಿಬಿದ್ದಿದ್ದು, ಬೈಕ್ ಚಾಲಕ ಕಾರಿನ ಛಾವಣಿಯ ಮೇಲೆ ಬಿದ್ದಿದ್ದಾನೆ. ಅಪಘಾತದ ವೇಳೆ ಕಾರ್ ನ ಬಲಭಾಗದ ಬಾಗಿಲು ಹಾಳಾಗಿದೆ.

ದ್ವಿಚಕ್ರವಾಹನದ ಮುಂಭಾಗ ತೀವ್ರವಾಗಿ ಹಾನಿಗೊಳಗಾಗಿದ್ದು, ಅವಶೇಷಗಳು ನೆಲದ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಅಪಘಾತ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ. . ಗುವಾಂಗ್ಕ್ಸಿ ಪ್ರಾಂತ್ಯದ ಲಿಯುಝೌ ನಗರದಲ್ಲಿನಡೆದಿರುವ ಅಪಘಾತ ಘಟನೆ ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದೆ.


Spread the love

By admin