Spread the love

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಮಾಜಿ ಪತ್ನಿ ರೆಹಮ್ ಖಾನ್ ಈಗ ಮೂರನೇ ಬಾರಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬ್ರಿಟಿಷ್-ಪಾಕಿಸ್ತಾನಿ ಪತ್ರಕರ್ತೆಯಾಗಿರುವ ರೆಹಮ್​, ಈಗ ತಾವು ಮಿರ್ಜಾ ಬಿಲಾಲ್ ಅವರೊಂದಿಗಿನ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ, ಅವರು ತಮ್ಮ ಮೂರನೇ ಮದುವೆಯನ್ನು ಘೋಷಿಸುವ ಮೂಲಕ ಮದುವೆಯ ಉಂಗುರ ತೋರಿಸಿದ್ದಾರೆ.”ಅಂತಿಮವಾಗಿ ನಾನು ನಂಬಬಹುದಾದ ವ್ಯಕ್ತಿಯನ್ನು ಕಂಡುಕೊಂಡಿದ್ದೇನೆ” ಎಂದು ರೆಹಮ್ ಖಾನ್ ಬರೆದಿದ್ದಾರೆ, ನವವಿವಾಹಿತ ದಂಪತಿ ಚಿತ್ರವನ್ನು ಶೇರ್ ಮಾಡಿಕೊಂಡಿದ್ದಾರೆ.

ರೆಹಮ್ ಖಾನ್ ಮತ್ತು ಮಿರ್ಜಾ ಬಿಲಾಲ್ ಅಮೆರಿಕದ ಸಿಯಾಟಲ್‌ನಲ್ಲಿ ಸರಳವಾದ ಸಮಾರಂಭದಲ್ಲಿ ವಿವಾಹವಾದರು. ರೆಹಮ್​ ಖಾನ್​ 2015 ರಲ್ಲಿ ಇಮ್ರಾನ್ ಖಾನ್ ಅವರನ್ನು ತೊರೆದರು. ಇಮ್ರಾನ್​ ಖಾನ್,​ ಇವರ ಎರಡನೇ ಪತಿ. ಅದಕ್ಕೂ ಮೊದಲು ಅಂದರೆ 1993ರಲ್ಲಿ, ಅವರು ತಮ್ಮ ಮೊದಲ ಸೋದರಸಂಬಂಧಿ, ಇಜಾಜ್ ರೆಹಮಾನ್ ಎಂಬ ಬ್ರಿಟಿಷ್ ಮನೋವೈದ್ಯರನ್ನು ವಿವಾಹವಾಗಿದ್ದರು. ಆದಾಗ್ಯೂ, 2005 ರಲ್ಲಿ ಈ ದಾಂಪತ್ಯ ಜೀವನ ಕೊನೆಗೊಂಡಿತ್ತು. 2014 ರಲ್ಲಿ ಇಮ್ರಾನ್ ಖಾನ್ ಅವರನ್ನು ವಿವಾಹವಾಗಿ 10 ತಿಂಗಳಲ್ಲೇ ಬೇರೆಯಾದರು.


Spread the love

By admin