Spread the love

ಸಿದ್ಧಾರ್ಥ್ ಆನಂದ್ ನಿರ್ದೇಶನದ ‘ಪಠಾಣ್’ ಚಿತ್ರವು ನಟ ಶಾರುಖ್ ಖಾನ್‌ರ ಕಮ್ ಬ್ಯಾಕ್ ಸಿನೆಮಾ ಎಂದೇ ಬಿಂಬಿಸಲಾಗಿತ್ತು. ಆದ್ರೆ ರಿಲೀಸ್‌ಗೂ ಮುನ್ನವೇ ಈ ಚಿತ್ರ ಸಾಕಷ್ಟು ವಿವಾದಗಳನ್ನು ಸೃಷ್ಟಿಸಿದೆ.

ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಕೂಡ ನಟಿಸಿದ್ದಾರೆ.

ಬಿಡುಗಡೆಗೂ ಮುನ್ನವೇ ವಿವಾದಗಳಿಂದ ಸುತ್ತುವರಿದಿರುವ ಪಠಾಣ್‌ ಚಿತ್ರದ ಓಟಿಟಿ ಹಕ್ಕು ಈಗಾಗ್ಲೇ ಮಾರಾಟವಾಗಿದೆ.

ಪಠಾಣ್ ಚಿತ್ರ 2023ರ ಜನವರಿ 25ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಬಳಿಕ OTT ನಲ್ಲಿಯೂ ಸಿನೆಮಾವನ್ನು ವೀಕ್ಷಿಸಬಹುದು. ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ನೀವು ಪಠಾಣ್‌ ಚಿತ್ರವನ್ನು ವೀಕ್ಷಿಸಬಹುದು.

ಯಾಕಂದ್ರೆ ಅಮೇಜಾನ್‌ ಪ್ರೈಮ್‌, ಪಠಾಣ್‌ ಚಿತ್ರದ ಓಟಿಟಿ ಹಕ್ಕನ್ನು ಖರೀದಿಸಿದೆ. ಮಾರ್ಚ್ ಕೊನೆಯಲ್ಲಿ ಅಥವಾ ಏಪ್ರಿಲ್ ಆರಂಭದಲ್ಲಿ ಪಠಾಣ್ ಸಿನೆಮಾ ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ಲಭ್ಯವಾಗುವ ನಿರೀಕ್ಷೆ ಇದೆ. ಮೂಲಗಳ ಪ್ರಕಾರ ಈ ಚಿತ್ರದ ಜಾಗತಿಕ OTT ಹಕ್ಕುಗಳನ್ನು ಅಮೆಜಾನ್ ಪ್ರೈಮ್ ವಿಡಿಯೋ 100 ಕೋಟಿ ರೂಪಾಯಿಗೆ ಖರೀದಿಸಿದೆಯಂತೆ.

ಡಿಸೆಂಬರ್‌ 23ರಂದೇ ಚಿತ್ರದ ತಯಾರಕರು ಮತ್ತು OTT ಪ್ಲಾಟ್‌ಫಾರ್ಮ್ ನಡುವೆ ಒಪ್ಪಂದವಾಗಿದೆ. ಪಠಾಣ್ ಚಿತ್ರದ ಮೊದಲ ಹಾಡು ‘ಬೇಷರಂ ರಂಗ್’ ಬಿಡುಗಡೆಯಾದಾಗಿನಿಂದ ಸಿನೆಮಾ ವಿವಾದಗಳಲ್ಲಿ ಸಿಲುಕಿಕೊಂಡಿದೆ. ಚಿತ್ರವನ್ನು ಬಹಿಷ್ಕರಿಸುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಕೂಡ ನಡೀತಿದೆ.


Spread the love

By admin