Spread the love

ದೇ ಡಿಸೆಂಬರ್ 24 ರಂದು ಆತ್ಮಹತ್ಯೆ ಮಾಡಿಕೊಂಡ ನಟಿ ತನಿಷಾ ಶರ್ಮಾ ಕುರಿತು ಇನ್ನಷ್ಟು ವಿಷಯಗಳು ಬೆಳಕಿಗೆ ಬರುತ್ತಿವೆ. ಶೂಟಿಂಗ್‌ ಸೆಟ್‌ನಲ್ಲಿಯೇ ಈಕೆ ಆತ್ಮಹತ್ಯೆಗೆ ಶರಣಾಗಿದ್ದರು. ಘಟನೆಗೆ ಸಂಬಂಧಿಸಿದಂತೆ ಈಕೆಯ ಗೆಳೆಯ ಸಹನಟ ಶೀಜಾನ್ ಮೊಹಮ್ಮದ್ ಖಾನ್‌ನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

 

ವಿಚಾರಣೆ ವೇಳೆ, ತನಿಷಾ ಕೊನೆಯದಾಗಿ ಶೀಜಾನ್ ಜೊತೆ ಊಟ ಮಾಡಿರುವುದು ತಿಳಿದುಬಂದಿದೆ. ಚಿತ್ರೀಕರಣ ನಿರ್ಮಾಣದ ಸದಸ್ಯರು ಮತ್ತು ಘಟಕದ ಸದಸ್ಯರು ಸೇರಿದಂತೆ ಇಡೀ ತಂಡವೂ ಅಲ್ಲಿತ್ತು, ಮತ್ತು ಅವರೆಲ್ಲರೂ ಒಟ್ಟಿಗೆ ಊಟ ಮಾಡಿದ್ದರು. ನಂತರ ಏನಾಯಿತು ಎನ್ನುವುದು ತಿಳಿದುಬಂದಿದೆ.

ಇದಕ್ಕೂ ಮುನ್ನ ತಾಯಿ ವನಿತಾ ಶರ್ಮಾ ಅವರ ಬಳಿ ಮಾತನಾಡಿದ್ದ ತನಿಷಾ ಸಹನಟ ಶೀಜಾನ್ ಮೊಹಮ್ಮದ್ ಖಾನ್‌ ಮೋಸ ಮಾಡಿದ್ದಾನೆ ಎಂದು ಹೇಳಿಕೊಂಡಿದ್ದಳು. ಮೊದಲೇ ಬೇರೆ ಮಹಿಳೆಯೊಂದಿಗೆ ಶಾಮೀಲಾಗಿದ್ದರೂ ತನ್ನನ್ನು ಮದುವೆಯಾಗುವುದಾಗಿ ಶೀಜಾನ್ ಭರವಸೆ ನೀಡಿದ್ದ ಎಂದು ಆಕೆ ಹೇಳಿಕೊಂಡಿದ್ದರು. 3-4 ತಿಂಗಳ ಕಾಲ ತನೀಶಾಳನ್ನು ಬಳಸಿಕೊಂಡಿದ್ದ ಖಾನ್‌, ನಂತರ ಗರ್ಭಪಾತವನ್ನೂ ಮಾಡಿಸಿದ್ದ ಎನ್ನಲಾಗಿದೆ.


Spread the love