Spread the love

ಬೆಳಗಾವಿ: ಆಸ್ತಿ ನೋಂದಣಿ ಅಕ್ರಮ ತಡೆಗೆ ಹೊಸ ಪದ್ದತಿ ಜಾರಿ ಮಾಡಲಿದ್ದು, ಕೆ- 2 ಸಾಫ್ಟ್ವೇರ್ ಮೂಲಕ ಜಮೀನು, ಆಸ್ತಿ ಅಪ್ಲೋಡ್ ವ್ಯವಸ್ಥೆ ಜಾರಿಗೆ ಬರಲಿದೆ. ಬಳ್ಳಾರಿಯಲ್ಲಿ ಪ್ರಾಯೋಗಿಕವಾಗಿ ಜಾರಿ ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.ವಿಧಾನ ಪರಿಷತ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಕಂದಾಯ ಇಲಾಖೆಯಲ್ಲಿ ಹಲವಾರು ಸುಧಾರಣೆ ಸರಳೀಕರಣ ಮಾಡುವ ಮೂಲಕ ಜನಸ್ನೇಹಿಯಾಗಿ ರೂಪಿಸಲಾಗುತ್ತಿದೆ ಎಂದರು.

ಕೆ -2 ಸಾಫ್ಟ್ವೇರ್ ಮೂಲಕ ಜಮೀನು, ಆಸ್ತಿ ಅಪ್ಲೋಡ್ ಮಾಡುವ ವ್ಯವಸ್ಥೆ ಜಾರಿಗೆ ತರಲು ಉದ್ದೇಶಿಸಲಾಗಿದೆ. ಈಗಾಗಲೇ ಬಳ್ಳಾರಿಯಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನ ಮಾಡಲಾಗಿದೆ. ಯಾರು ಕೂಡ ದಾಖಲೆ ಸಲ್ಲಿಸಲು ಅಥವಾ ತಿದ್ದುಪಡಿ ಮಾಡಲು ಅವಕಾಶ ಇರುವುದಿಲ್ಲ. ಯಾವುದೇ ಒಂದು ಕುಟುಂಬದ ಸದಸ್ಯರು ತಮ್ಮೊಳಗೆ ಆಸ್ತಿ ಹಂಚಿಕೆ ಮಾಡಿ ನಕ್ಷೆಯಲ್ಲಿ ಗುರುತಿಸುವ ಜೊತೆಗೆ ಆಧಾರ್ ಮಾಹಿತಿಯನ್ನು ಅಪ್ಲಿಕೇಶನ್ ಮೂಲಕ ಅಪ್ಲೋಡ್ ಮಾಡಿದರೆ ಅವರ ಹೆಸರಿಗೆ ಆಸ್ತಿ ಹಂಚಿಕೆ ಮಾಡಲಾಗುವುದು ಎಂದು ಹೇಳಿದ್ದಾರೆ.


Spread the love

By admin