Spread the love

ಭಾರತದ ಅತ್ಯಂತ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾಗಿರುವ ಎಲಾನ್ ಮಸ್ಕ್ ಎಂದಿಗೂ ಗಮನವನ್ನು ಸೆಳೆಯಲು ವಿಫಲವಾಗುವುದಿಲ್ಲ ಆದರೆ ಈ ಬಾರಿ ವರ್ಚುವಲ್ ಮೀಟಿಂಗ್‌ನಲ್ಲಿ ತನ್ನ ಮೋಹಕತೆಯಿಂದ ಗಮನ ಸೆಳೆದಿದ್ದು ಅವರ ಮಗ.

ನವೆಂಬರ್‌ನಲ್ಲಿ, ಮಸ್ಕ್ ಅವರು ಸ್ಪೇಸ್‌ಎಕ್ಸ್‌ನ ಸ್ಟಾರ್‌ಶಿಪ್ ಅಭಿವೃದ್ಧಿಯನ್ನು ಚರ್ಚಿಸಲು ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್‌ನ ಬಾಹ್ಯಾಕಾಶ ಅಧ್ಯಯನ ಮಂಡಳಿ ಮತ್ತು ಭೌತಶಾಸ್ತ್ರ ಮತ್ತು ಖಗೋಳಶಾಸ್ತ್ರದ ಮಂಡಳಿಯ ಜಂಟಿ ಡಿಜಿಟಲ್ ಸಭೆಯಲ್ಲಿ ಭಾಗವಹಿಸಿದರು.

ಮಸ್ಕ್ ತಮ್ಮ ಭಾಷಣದಿಂದ ಪ್ರೇಕ್ಷಕರನ್ನು ಆಕರ್ಷಿಸಿದರೆ, ಅವರ ಎರಡು ವರ್ಷದ ಮಗ ತನ್ನ ಹಾವಭಾವಗಳಿಂದ ಹೃದಯಗಳನ್ನು ಗೆದ್ದಿದ್ದಾನೆ. ಈತನೇ ನಿಜವಾದ ತಾರೆಯಾಗಿದ್ದಾನೆ.

ಝೂಮ್ ಸಭೆಯಲ್ಲಿ ಮಗ ಕಾಣಿಸಿಕೊಂಡು ಮುದ್ದುಮುದ್ದಾಗಿ ಹಾವಭಾವ ಮಾಡಿದ್ದಾನೆ. ಈ ಸಂದರ್ಭದಲ್ಲಿ ಎಲಾನ್​ ಮಸ್ಕ್​ ಬಾಹ್ಯಾಕಾಶ ನೌಕೆಯ ಬಗ್ಗೆ ವಿವರಿಸುತ್ತಿದ್ದರು. ಆಗ ಅವರ ಮಗ ಕ್ಯಾಮೆರಾ ಮುಂದೆ ಬಂದು “ಹಾಯ್, ಹಾಯ್, ಹಾಯ್” ಎಂದು ಹೇಳಲು ಪ್ರಾರಂಭಿಸಿದ್ದಾನೆ. ನಂತರ ಆನ್‌ಲೈನ್‌ನಲ್ಲಿದ್ದ ಜನರಿಗೆ ಕೈ ಬೀಸಿದ್ದಾನೆ.

ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ರಾಕೆಟ್ ಕಾಣಿಸಿಕೊಂಡಂತೆ “ಕಾರ್, ಕಾರ್” ಎಂದು ಮುದ್ದು ಭಾಷೆಯಲ್ಲಿ ಹೇಳಿದ್ದಾನೆ. ತನ್ನ ತಂದೆಯ ಮಡಿಲಲ್ಲಿ ಕುಳಿತ ಈತ ಜನರನ್ನು ನೋಡಲು ಉತ್ಸುಕನಾಗಿದ್ದ. ಈತನ ಮುಗ್ಧತೆ ಕಂಡು ನೆಟ್ಟಿಗರು ಫಿದಾ ಆಗಿದ್ದಾರೆ. ಇದು ವರ್ಷದ ಝೂಮ್​ ಕಾಲ್​ ಎಂದು ಹಲವರು ಹೇಳಿದ್ದಾರೆ.


Spread the love

By admin