Spread the love

ಲಂಡನ್‌: ನಿಷೇಧಿತ ಔಷಧ ಪೂರೈಸಿದ್ದಕ್ಕಾಗಿ ಭಾರತೀಯ ಮೂಲದ ಔಷಧ ವ್ಯಾ‍ಪಾರಿಯೊಬ್ಬರಿಗೆ ಬ್ರಿಟನ್‌ನ ನ್ಯಾಯಾಲಯವು 18 ತಿಂಗಳು ಜೈಲು ಶಿಕ್ಷೆ ವಿಧಿಸಿದೆ.

67 ವರ್ಷದ ದುಷ್ಯಂತ್‌ ಪಟೇಲ್ ಶಿಕ್ಷೆಗೆ ಒಳಗಾದ ಔಷಧ ವ್ಯಾಪಾರಿ. ಮಾದಕವಸ್ತು ವ್ಯಸನಿಯಾಗಿದ್ದ ಮಹಿಳೆಗೆ ನಿಷೇಧಿತ ಔಷಧಿಯನ್ನು ಪಟೇಲ್‌ ಪೂರೈಕೆ ಮಾಡುತ್ತಿದ್ದರು ಎನ್ನಲಾಗಿದೆ.

 

2020ರ ಆಗಸ್ಟ್‌ನಲ್ಲಿ ಮಹಿಳೆ ಮೃತಪಟ್ಟಿದ್ದರು. ಆಕೆ, ನಿಷೇಧಿತ ಔಷಧಿಯನ್ನು ಅಧಿಕ ಪ್ರಮಾಣದಲ್ಲಿ ಸೇವಿಸಿದ್ದರಿಂದಾಗಿ ಮೃತಪಟ್ಟಿರುವುದು ಮರಣೋತ್ತರ ಪರೀಕ್ಷೆಯಿಂದ ತಿಳಿದು ಬಂದಿತ್ತು. ಅಲ್ಲದೇ, ಪಟೇಲ್‌, ಆಕೆಗೆ ನಿಷೇಧಿತ ಔಷಧಿ ಪೂರೈಸಿದ್ದು ತನಿಖೆಯಿಂದ ದೃಢಪಟ್ಟಿತ್ತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.


Spread the love

By admin