Spread the love

ತ್ಯಂತ ಆರೋಗ್ಯಕರ ಮತ್ತು ಅತಿ ಹೆಚ್ಚಿನ ಪೌಷ್ಟಿಕಾಂಶವುಳ್ಳ ಹಾಗೂ ಹಲವಾರು ರೀತಿಯಲ್ಲಿ ಆರೋಗ್ಯಕ್ಕೆ ಉತ್ತಮವಾದ ಒಣಫಲವೆಂದರೆ ಬಾದಾಮಿ. ಈ ಫಲವನ್ನೂ ನೆನೆಸಿಟ್ಟು ಮೆದುವಾದ ಬಳಿಕ ಸೇವಿಸಿದರೆ ಇದರ ಗುಣಗಳು ಇನ್ನಷ್ಟು ಹೆಚ್ಚುತ್ತವೆ. ನಾವು ಮೊಳಕೆ ಬರಿಸಲು ಧಾನ್ಯಗಳನ್ನು ನೆನೆಸಿಟ್ಟ ಬಳಿಕ ಆ ಧಾನ್ಯಗಳಲ್ಲಿನ ಪೌಷ್ಟಿಕಾಂಶ ಹೆಚ್ಚುವುದಿಲ್ಲವೇ, ಅದೇ ರೀತಿ ಬಾದಾಮಿಯಲ್ಲಿಯೂ ಪೋಷಕಾಂಶಗಳು ಹೆಚ್ಚುತ್ತವೆ.

ಆದರೆ ಇದನ್ನು ಗೊರಟಿನಿಂದ ಒಡೆದು ತೆಗೆದಿರುವ ಕಾರಣ ಇದು ಮೊಳಕೆ ಬರಲಾರದು.

ಮಕ್ಕಳಿಗೆ ಸೇರಿದಂತೆ ಎಲ್ಲಾ ವಯೋಮಾನದವರ ನೆನೆಪಿನ ಶಕ್ತಿ ಹೆಚ್ಚಿಸಲು ಬಾದಾಮಿಯನ್ನು ಸೇವನೆ ಮಾಡುತ್ತಾರೆ. ಬಾದಾಮಿ ಸೇವನೆಯಿಂದ ನೆನಪಿನ ಶಕ್ತಿ ವೃದ್ಧಿಸುತ್ತದೆ ಎಂಬುದು ಕೂಡ ಸತ್ಯ ನೆನೆಸಿದ ಬಾದಾಮಿಯನ್ನು ತಿನ್ನುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ಇದರಲ್ಲಿನ ಪ್ರೋಟಿನ್​, ವಿಟಮಿನ್​, ಮೆಗ್ನಿಶಿಯಂ ದೇಹಕ್ಕೆ ಶಕ್ತಿ ಕೊಡುತ್ತದೆ.

ಇನ್ನು ಬಹುತೇಕರು ನೆನೆಸಿದ ಬಾದಾಮಿಯನ್ನು ಯಾವ ಹೊತ್ತಿನಲ್ಲಿ ತಿನ್ನಬೇಕು ಎಂಬ ಗೊಂದಲಕ್ಕೆ ಒಳಗಾಗುವುದು ಸಹಜ. ಬಾದಾಮಿಯನ್ನು ಬೆಳಗಿನ ಹೊತ್ತು ತಿನ್ನುವುದರಿಂದ ದಿನಪೂರ್ತಿ ಶಕ್ತಿ ನೀಡಲು ಇದು ಸಹಾಯ ಮಾಡುತ್ತದೆ. ಇದರಿಂದ ಇದರ ಸಂಪೂರ್ಣ ಲಾಭಾ ಪಡೆಯಬಹುದು

ಕಿಣ್ವಗಳ ಉತ್ಪಾದನೆಯಲ್ಲಿ ಹೆಚ್ಚಿನ ಪಾತ್ರವಹಿಸುವ ಬಾದಾಮಿ ಜೀರ್ಣ ಕ್ರಿಯೆಗೆ ಸಹಾಯ ಮಾಡುತ್ತದೆ. ಡಯಾಬೀಟಿಸ್​, ಹೃದಯ ಸಂಬಂಧಿ ಸಮಸ್ಯೆ, ಕೊಲೆಸ್ಟಾಲ್​ ಸಮಸ್ಯೆಗೆ ಇದು ಸಹಾಯಕಾರಿ. ಅಷ್ಟೇ ಅಲ್ಲದೇ, ಇದು ನಿಮ್ಮ ತ್ವಚೆ ಮತ್ತು ಕೂದಲಿನ ಆರೋಗ್ಯವನ್ನು ಕಾಪಾಡುತ್ತದೆ.

ಕೂದಲಿಗೆ ಬೇಕಾಗಿರುವ ಅಗತ್ಯ ಪೋಷಕಾಂಶ ಬಾದಾಮಿಯಲ್ಲಿರುವುದರಿಂದ ಕೂದಲಿನ ಆರೈಕೆಗೆ ನೆರವಾಗುತ್ತದೆ. ಒಣ ಬಾದಾಮಿಗಿಂತ ನೆನೆಸಿಟ್ಟು ಸೇವಿಸಿದಾಗ ಜೀರ್ಣಿಸಿಕೊಳ್ಳುವುದು ಸುಲಭ. ಈ ಹಿನ್ನಲೆ ಬಾದಾಮಿಯನ್ನು ನೆನೆಸಿ ತಿನ್ನುವುದು ಸೂಕ್ತ ಎನ್ನಲಾಗುತ್ತದೆ.

ಬಾದಾಮಿ ಬೀಜಗಳು ವಿಟಮಿನ್ E ಯನ್ನು ಸಮೃದ್ಧವಾಗಿ ಒಳಗೊ೦ಡಿರುವುದರಿ೦ದ, ಅವು ಶರೀರದ ಅನಾರೋಗ್ಯಕರ ಕೊಲೆಸ್ಟ್ರಾಲ್ ಅನ್ನು ತಗ್ಗಿಸುತ್ತವೆ. ಇದರ ನೇರ ಪರಿಣಾಮವು ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವುದರ ಮೇಲೆ ಧನಾತ್ಮಕವಾಗಿ ಆಗುತ್ತದೆ.

ಹೃದಯ ರೋಗದ ಸಮಸ್ಯೆ ಇರುವವರು, ದಿನಾ 3-4 ಬಾದಾಮಿ ಬೀಜಗಳನ್ನು ರಾತ್ರಿ ಮಲಗುವ ಮುನ್ನ ನೀರಿನಲ್ಲಿ ನೆನೆಸಿಟ್ಟು, ಮುಂಜಾನೆ ಸೇವಿಸುವುದರಿಂದ ಆರೋಗ್ಯಕ್ಕೆ ಬಹಳ ಒಳ್ಳೆಯದು. ಅವುಗಳಲ್ಲಿನ ಆರೋಗ್ಯಕರ ಕೊಲೆಸ್ಟ್ರಾಲ್‌ನ ಮಟ್ಟದಲ್ಲಿ ಹೆಚ್ಚಳವಾಗುತ್ತದೆ

ದಿನಾ ಮೂರು- ನಾಲ್ಕು ನೆನೆಸಿಟ್ಟ ಬಾದಾಮಿ ಬೀಜಗಳನ್ನು ಸೇವಿಸುವುದರ ಮೂಲಕ ಶುಕ್ರ ಗ್ರ೦ಥಿಯ ಹಾಗೂ ಸ್ತನಗಳ ಕ್ಯಾನ್ಸರ್ ರೋಗಗಳನ್ನು ತಡೆಗಟ್ಟಬಹುದು. ಬಾದಾಮಿ ಕಾಳುಗಳಲ್ಲಿರುವ ಫ್ಲೊವೊನಾಯ್ಡ್ ಗಳು ಹಾಗೂ ವಿಟಮಿನ್ E ಯು ಇ೦ತಹ ಕ್ಯಾನ್ಸರ್ ರೋಗಗಳು ತಲೆ ಎತ್ತದ೦ತೆನೋಡಿಕೊಳ್ಳುತ್ತವೆ. ಕ್ಯಾನ್ಸರ್ ನ ಸ೦ಭವನೀಯತೆಯನ್ನು ಕಡಿಮೆ ಮಾಡುವುದರ ಮೂಲಕ ಬಾದಾಮಿ ಬೀಜಗಳು ವ್ಯಕ್ತಿಯೋರ್ವನ ಆಯುರ್ಮಾನವನ್ನು ಹೆಚ್ಚಿಸಬಲ್ಲವು.

ಬಾದಾಮಿ ಕಾಳುಗಳಲ್ಲಿರುವ ಫೋಲಿಕ್ ಆಮ್ಲವು ನವಜಾತ ಶಿಶುಗಳಲ್ಲಿ ಸ೦ಭಾವ್ಯ ಜನನ ದೋಷಗಳ ಪ್ರಮಾಣವನ್ನು ಗಣನೀಯ ಪ್ರಮಾಣದಲ್ಲಿ ತಗ್ಗಿಸುತ್ತದೆ. ಹೀಗಾಗಿ, ಗರ್ಭಿಣಿ ಸ್ತ್ರೀಯು ನೀರಿನಲ್ಲಿ ನೆನೆಸಿಟ್ಟಿರಬಹುದಾದ ಬಾದಾಮಿ ಕಾಳುಗಳನ್ನು ಸೇವಿಸುವ೦ತೆ ಸಲಹೆ ಮಾಡಲಾಗುತ್ತದೆ.


Spread the love

By admin