Spread the love

ನಿಂಬೆಹಣ್ಣು ಎಲ್ಲರ ಮನೆಗಳಲ್ಲಿ ಇರುತ್ತದೆ. ಅದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿದೆ. ನಿಮಗೆ ಗೊತ್ತಾ ಒಂದು ನಿಂಬೆಹಣ್ಣು ಮನೆಯ ಹಲವಾರು ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಮನೆಯಲ್ಲಿ ನಿಂಬೆಹಣ್ಣಿದ್ದರೆ ಏನೆಲ್ಲಾ ಪ್ರಯೋಜನವಿದೆ ಎಂಬುದು ಇಲ್ಲಿದೆ. ಕತ್ತರಿಸಿ ಇಟ್ಟ ಸೇಬುಹಣ್ಣು ಕಪ್ಪು ಬಣ್ಣಕ್ಕೆ ತಿರುಗಬಾರದು ಎಂದರೆ, ಒಂದು ಪಾತ್ರೆಯಲ್ಲಿ ನೀರಿಗೆ ನಿಂಬೆರಸ ಹಾಕಿ, ಅದಕ್ಕೆ ಸೇಬು ತುಂಡನ್ನು ಹಾಕಿ, 2 ನಿಮಿಷಗಳ ನಂತರ ತೆಗೆದು ಇಡಿ.

ಇದು ಹಣ್ಣು ಕಪ್ಪಾಗದಂತೆ ಕಾಪಾಡುತ್ತದೆ.

ತಲೆಹೊಟ್ಟಿನ ಸಮಸ್ಯೆ ಇದ್ದರೆ, ಸ್ನಾನ ಮಾಡುವ ಮೊದಲು ನಿಂಬೆಹಣ್ಣನ್ನು ನೆತ್ತಿಯ ಭಾಗಕ್ಕೆ ಉಜ್ಜಿ, ಹತ್ತು ನಿಮಿಷಗಳ ನಂತರ ತಲೆಸ್ನಾನ ಮಾಡಿ. ನಿಂಬೆಯ ಸಿಪ್ಪೆಯನ್ನು ಬಿಸಿ ನೀರಿನಲ್ಲಿ ಹಾಕಿ ಕುದಿಸಿ, ನಂತರ ಅದಕ್ಕೆ ಸಕ್ಕರೆ ಹಾಕಿ ಕಲಸಿ, ಅದು ಮೃದುವಾದ ನಂತರ, ಅದರ ಮೇಲೆ ಸಕ್ಕರೆ ಹಾಕಿ ಒಣಗಳು ಬಿಡಿ. ಇದು ರುಚಿಯಾದ ಕ್ಯಾಂಡಿಯಾಗುತ್ತದೆ. ಇದನ್ನು ನೀವು ಹೆಚ್ಚು ದಿನ ಇಟ್ಟುಕೊಂಡು ಸವಿಯಬಹುದು.

ನಿಂಬೆ ಸಿಪ್ಪೆಯ ಪುಡಿಯನ್ನು ನೀವು ಸಾಮಾನ್ಯವಾಗಿ ತಯಾರಿಸುವ ಆಹಾರಕ್ಕೆ ಬಳಕೆ ಮಾಡಬಹುದು. ಇದರಿಂದ ಆಹಾರದ ರುಚಿ ಮತ್ತು ಪರಿಮಳ ಹೆಚ್ಚಾಗುತ್ತದೆ. ಬಟ್ಟೆಯ ಮೇಲೆ ಕಲೆಗಳು ಉಂಟಾಗುವುದು ಸಾಮಾನ್ಯ, ಅದನ್ನು ಸೋಪಿನಿಂದ ತೊಳೆದರೆ ಹೋಗುವುದಿಲ್ಲ. ಆಗಾ ನಿಂಬೆಹಣ್ಣಿನ ಜೊತೆ ಉಪ್ಪು ಹಾಕಿ ಕಲೆಯ ಮೇಲೆ ಉಜ್ಜಿ. ಇದರಿಂದ ಕಲೆ ಬೇಗ ಹೋಗುತ್ತದೆ.

ಬೆಚ್ಚಗಿನ ನೀರಿಗೆ ನಿಂಬೆ ರಸ ಹಾಕಿ ಅದರಲ್ಲಿ ನಿಮ್ಮ ಉಗುರನ್ನ ಅದ್ದಿ. ಸುಮಾರು ಹತ್ತು ನಿಮಿಷದ ನಂತರ ಅದನ್ನು ತೊಳೆಯಿರಿ. ಇದು ನಿಮ್ಮ ಉಗುರಿನ ಅಂದವನ್ನು ಹೆಚ್ಚಿಸುತ್ತದೆ. ತೂಕ ಇಳಿಸಲು ನಿಂಬೆರಸ ಸಹಾಯ ಮಾಡುತ್ತದೆ. ಬೆಚ್ಚಗಿನ ನೀರಿಗೆ ನಿಂಬೆರಸ ಹಾಕಿ ಕುಡಿಯುವುದು ತೂಕವನ್ನು ಕಡಿಮೆ ಮಾಡುತ್ತದೆ.

ನಿಂಬೆ ಜ್ಯೂಸ್​ ಕುಡಿಯುವುದು ನಿಮ್ಮನ್ನ ರಿಫ್ರೆಶ್​ ಆಗಿರುವಂತೆ ನೋಡಿಕೊಳ್ಳುತ್ತದೆ. ಆಯಾಸವನ್ನು ಕಡಿಮೆ ಮಾಡಿ, ಉಲ್ಲಾಸದಿಂದಿರಲು ಸಹಾಯ ಮಾಡುತ್ತದೆ. ಇಷ್ಟೆಲ್ಲಾ ಲಾಭಗಳಿರುವ ನಿಂಬೆಹಣ್ಣನ್ನು ನಾವು ಪ್ರತಿನಿತ್ಯ ಬಳಸಿದರೆ ಆರೋಗ್ಯ ಪ್ರಯೋಜನಗಳ ಜೊತೆಗೆ ಮನೆಯ ಕೆಲ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.


Spread the love

By admin