Spread the love

`ಕಾಂತಾರ’ ದ ನಟ ರಿಷಬ್ ಶೆಟ್ಟಿಗೆ ದೇಶದ ಎಲ್ಲೆಡೆ ಫ್ಯಾನ್ಸ್ ಇದ್ದಾರೆ. ಕಾಂತಾರ ಸಿನಿಮಾದಲ್ಲಿನ ರಿಷಬ್ ನಿರ್ದೇಶನ, ನಟನೆ ನೋಡಿ ಪರ ಭಾಷೆಯ ಸ್ಟಾರ್ ಕಲಾವಿದರು ರಿಷಬ್ ಶೆಟ್ಟಿ ಜೊತೆ ಸಿನಿಮಾ ಮಾಡುವ ಆಸೆ ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲೂ ಅನೇಕ ಸ್ಟಾರ್ ನಟ-ನಟಿಯರು ರಿಷಬ್ ಶೆಟ್ಟಿ ಜೊತೆ ಸಿನಿಮಾ ಮಾಡಲು ತುದಿಗಾಲಿನಲ್ಲಿ ನಿಂತಿದ್ದಾರೆ.

ಈಗಾಗಲೇ ಅನೇಕರು ಈ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಇದೀಗ ನಟಿ ಜಾನ್ವಿ ಕಪೂರ್ ರಿಷಬ್ ಜೊತೆ ಸಿನಿಮಾ ಮಾಡುವ ಆಸೆ ವ್ಯಕ್ತಪಡಿಸಿದ್ದಾರೆ.

ಸಂದರ್ಶನವೊಂದರಲ್ಲಿ ಜಾನ್ವಿ ಕಪೂರ್ ರಿಷಬ್ ಶೆಟ್ಟಿ ಬಗ್ಗೆ ಮಾತನಾಡಿದ್ದಾರೆ. ರಿಷಬ್ ಶೆಟ್ಟಿಯನ್ನು ಹಾಡಿಹೊಗಳಿರುವ ಜಾನ್ವಿ ಕಪೂರ್ ಅವರ ಜೊತೆ ಸಿನಿಮಾ ಮಾಡಬೇಕು ಎಂದಿದ್ದಾರೆ. ರಿಷಬ್ ಶೆಟ್ಟಿಯನ್ನು ತುಂಬಾ ಇಷ್ಟಪಡುತ್ತೇನೆ. `ಕಾಂತಾರ’ ಕೊನೆಯ 30 ನಿಮಿಷಗಳು ಅವರು ಏನು ಮಾಡಿದ್ದಾರೆ ಎಂಬುದು ಸಿನಿಮಾನೇ ತೋರಿಸಿ ಕೊಟ್ಟಿದೆ. ಕಾಂತಾರ ತುಂಬಾ ವಿಭಿನ್ನವಾಗಿದೆ. ಆ ಸ್ಥಳ, ಸಮುದಾಯ, ಧಾರ್ಮಿಕ ಪದ್ಧತಿ, ಪ್ರತಿಯೊಬ್ಬರೂ ರಿಲೇಟ್ ಆಗಲು ಸಾಧ್ಯವಾಯಿತು. ಏಕೆಂದರೆ ತಮ್ಮ ಪರಿಸರವನ್ನು ಪ್ರಾಮಾಣಿಕವಾಗಿ ಮತ್ತು ನಿಖರವಾಗಿ ಚಿತ್ರಸಿದ್ದಾರೆ ಎಂದಿದ್ದಾರೆ.


Spread the love

By admin