Spread the love

ಯಾಂಗಾನ್: ಮ್ಯಾನ್ಮಾರ್ ನ ಪದಚ್ಯುತ ನಾಯಕಿ ಆಂಗ್ ಸಾನ್ ಸೂಕಿಗೆ ಗೆಭ್ರಷ್ಟಾಚಾರ ಪ್ರಕರಣದಲ್ಲಿ ಅಲ್ಲಿನ ಸೇನಾಡಳಿತ 7 ವರ್ಷದ ಜೈಲುಶಿಕ್ಷೆ ವಿಧಿಸಿರುವುದಾಗಿ ಸುದ್ಧಿಸಂಸ್ಥೆ ವರದಿಮಾಡಿದೆ.

ಹೆಲಿಕಾಪ್ಟರ್ ಬಾಡಿಗೆಗೆ ಪಡೆದ, ಖರೀದಿಸಿದ ಮತ್ತು ಅದನ್ನು ನಿರ್ವಹಿಸುವ ಮೂಲಕ ಖಜಾನೆಗೆ ನಷ್ಟ ಮಾಡಿದ ಪ್ರಕರಣದಲ್ಲಿ ಸೂಕಿ 5 ಕೌಂಟ್ಗಳ ಭ್ರಷ್ಟಾಚಾರ ಅಪರಾಧ ಎಸಗಿರುವುದು ಸ್ಪಷ್ಟವಾಗಿದೆ ಎಂದು ಮೂಲಗಳು ಹೇಳಿವೆ.

 

2021ರ ಕ್ಷಿಪ್ರ ದಂಗೆಯ ಬಳಿಕ ಬಂಧನದಲ್ಲಿರುವ 77 ವರ್ಷದ ಸೂಕಿಯ ವಿರುದ್ಧ ದಾಖಲಾಗಿರುವ ಎಲ್ಲಾ ಪ್ರಕರಣಗಳಲ್ಲೂ ಅಪರಾಧ ಸಾಬೀತಾಗಿದ್ದು ಒಟ್ಟು 33 ವರ್ಷದ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಇನ್ನು ಅವರ ವಿರುದ್ಧ ಯಾವುದೇ ಪ್ರಕರಣದ ವಿಚಾರಣೆ ಬಾಕಿಯುಳಿದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಳೆದ ವಾರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಮಿತಿಯಲ್ಲಿ, ಸೂಕಿಯನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಆಗ್ರಹಿಸುವ ನಿರ್ಣಯವನ್ನು ಅಂಗೀಕರಿಸಲಾಗಿದೆ. ಈ ಸಭೆಯಲ್ಲಿ ಭದ್ರತಾ ಮಂಡಳಿಯ ಎಲ್ಲಾ ಕಾಯಂ ಸದಸ್ಯರು ಅಪರೂಪದ ಒಗ್ಗಟ್ಟು ಪ್ರದರ್ಶಿಸಿದ್ದರು. ಮ್ಯಾನ್ಮಾರ್ ಸೇನಾಡಳಿತದ ನಿಕಟ ಮಿತ್ರದೇಶಗಳಾದ ರಶ್ಯ ಮತ್ತು ಚೀನಾ ನಿರ್ಣಯದ ವಿರುದ್ಧ ವಿಟೊ ಚಲಾಯಿಸದಿರುವುದು ಗಮನಾರ್ಹವಾಗಿದೆ.


Spread the love

By admin