Spread the love

ಬೆಂಗಳೂರು: ಹೊಸ ವರ್ಷದ ಆರಂಭದಲ್ಲಿ ಭರ್ಜರಿ ಎಣ್ಣೆ ಮಾರಾಟ ಮಾಡುವ ಮೂಲಕ ಅಬಕಾರಿ ಇಲಾಖೆ ಬಂಪರ್​ ಲಾಭ ಪಡೆದಿದೆ. ಕೊರೊನಾದಿಂದಾಗಿ ಕಳೆದ ಮೂರು ವರ್ಷದಿಂದ ಹೊಸ ವರ್ಷವನ್ನು ಸಂಭ್ರಮಿಸಲಾಗಿರಲಿಲ್ಲ. ಈ ಬಾರಿ ಹೊಸ ವರ್ಷಾಚರಣೆಗೆ ಅವಕಾಶ ಸಿಕ್ಕಿತ್ತು.

ಹಾಗಾಗಿ ಇಡೀ ರಾಜ್ಯದ ಜನರು ರಾತ್ರಿಯಲ್ಲ ಕಣಿದು ಕುಪ್ಪಳಿಸುವ ಮೂಲಕ ಸಂಭ್ರಮದಿಂದ ಹೊಸ ವರ್ಷವನ್ನು ಸ್ವಾಗತಿಸಿದರು. ಇಡೀ ಜಗತ್ತು 2022ಗೆ ಗುಡ್ ಬಾಯ್ ಹೇಳಿ 2023 ಬರಮಾಡಿಕೊಂಡಿದೆ.

ಇನ್ನು ಹೊಸ ವರ್ಷವೆಂದ ಮೇಲೆ ಗುಂಡು ತುಂಡು ಇರಲೇಬೇಕು. ಹೊಸ ವರ್ಷದ ಆರಂಭದಲ್ಲಿ ಭರ್ಜರಿ ಎಣ್ಣೆ ಮಾರಾಟ ಮಾಡುವ ಮೂಲಕ ಅಬಕಾರಿ ಇಲಾಖೆ ಬಂಪರ್​ ಬೆಳೆ ಬೆಳೆದಿದೆ. ಹೊಸ ವರ್ಷಕ್ಕೆ ಲಕ್ಷ ಲಕ್ಷ ಲೀಟರ್ ಮದ್ಯವನ್ನ ಪಾನಪ್ರಿಯರು ಹೊಟ್ಟೆಗಿಳಿಸಿಕೊಂಡಿದ್ದಾರೆ. ಅಬಕಾರಿ ಇಲಾಖೆ ಬೊಕ್ಕಸಕ್ಕೆ 657 ಕೋಟಿ ರೂ. ಆದಾಯ ಹರಿದು ಬಂದಿದೆ. ಕಳೆದ ಐದು ದಿನದಲ್ಲಿ ಅಬಕಾರಿ ಇಲಾಖೆ ಭರ್ಜರಿ ಮದ್ಯ ಮಾರಾಟ ಮಾಡಲಾಗಿದೆ.


Spread the love