Spread the love

ಬೆಂಗಳೂರು: ವಸತಿ ಸಚಿವ ವಿ ಸೋಮಣ್ಣ ನಿವಾಸಕ್ಕೆ ಅಮಿತ್ ಶಾ ನಿನ್ನೆ ದಿಡೀರ್ ಭೇಟಿ ಕೊಟ್ಟಿದ್ದು, ಸತತ ಒಂದು ಗಂಟೆಗಳ ಕಾಲ ಸಭೆ ನಡೆಸಿದ್ದಾರೆ. ರಾಜ್ಯ ರಾಜಕಾರಣದಲ್ಲಿ ದಿಡೀರನೆ ನಡೆದ ಈ ರಾಜಕೀಯ ಸ್ಪೋಟಕ ಬೆಳವಣಿಗೆ ಬಿಜೆಪಿ ಮಾತ್ರವಲ್ಲದೆ ಕಾಂಗ್ರೆಸ್ ನಲ್ಲಿಯೂ ಹಲವು ಲೆಕ್ಕಾಚಾರಗಳಿಗೆ ಎಡೆ ಮಾಡಿಕೊಟ್ಟಿದೆ.

ವಿಜಯ ನಗರದ ಸೋಮಣ್ಣ ನಿವಾಸಕ್ಕೆ ಆಗಮಿಸಿದ ಅಮಿತ್ ಶಾ ಮತ್ತು ಸಂತೋಷ್ ಜಿ ಸತತ ಒಂದು ಗಂಟೆಗಳ ಕಾಲ ಮಾತುಕತೆ ನಡೆಸಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಯಡಿಯೂರಪ್ಪನವರಿಗೆ ಪರ್ಯಾಯವಾಗಿ ಸೋಮಣ್ಣ ಅವರನ್ನು ಬಳಸಿಕೊಳ್ಳುತ್ತಾರೆ ಎಂಬುದೇ ರಾಜಕೀಯ ವಲಯಗಳಲ್ಲಿ ಲೆಕ್ಕಾಚಾರ ಶುರುವಾಗಿದೆ.

ರಾಜ್ಯದಲ್ಲಿರುವ ಬಹುತೇಕ ಮಟಮಾನ್ಯಗಳೊಂದಿಗೆ ನೇರ ಸಂಪರ್ಕ ಹೊಂದಿರುವ ಸೋಮಣ್ಣ ಹಿರಿಯ ಲಿಂಗಾಯುತ ಸಮುದಾಯದ ನಾಯಕ ಎಂಬುದರಲ್ಲಿ ಎರಡು ಮಾತೇ ಇಲ್ಲ. ವರ್ಚಸ್ಸು ವರ್ಚಸ್ಸು ಮತ್ತು ಹೆಸರನ್ನು ಬಳಸಿಕೊಂಡು ಯಡಿಯೂರಪ್ಪನವರಿಗೆ ಪರ್ಯಾಯವಾಗಿ ಸೋಮಣ್ಣನವರನ್ನು ಬಳಸಿಕೊಳ್ಳುತ್ತಾರೆ ಬಿಜೆಪಿ ಹೈಕಮಾಂಡ್ ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.


Spread the love

By admin