Spread the love

ಬೆಂಗಳೂರಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರೊನಾ ಲಸಿಕೆ ಕೊರತೆ ಇರುವ ಕಾರಣ ಜನರು ಖಾಸಗಿ ಆಸ್ಪತ್ರೆಗಳತ್ತ ಮುಖಮಾಡುತ್ತಿ ದ್ದಾರೆ. ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಭಯಗೊಂಡಿರುವ ಜನತೆ ಬೂಸ್ಟರ್ ಲಸಿಕೆ ಪಡೆಯಲು ಮುಂದಾಗಿದ್ದಾರೆ.

ಹೇಗೂ ಕೊರೊನಾ ಕಡಿಮೆಯಾಗಿದೆ ಎಂದು ಬೂಸ್ಟರ್ ಲಸಿಕೆ ಪಡೆಯಲು ಜನರು ಹಿಂದೇಟು ಹಾಕಿದ್ದರು. ಒಂದು ಖಾಸಗಿ ಆಸ್ಪತ್ರೆಯಲ್ಲಿ ದಿನಕ್ಕೆ 50-100 ಜನರು ಲಸಿಕೆ ಪಡೆಯುತ್ತಿದ್ದಾರೆ, ಈಗಾಗಲೇ ಖಾಸಗಿ ಆಸ್ಪತ್ರೆಗಳಲ್ಲಿ 10 ಸಾವಿರ ಲಸಿಕೆಗಳ ದಾಸ್ತಾನು ಇದೆ.

ಈಗಾಗಲೇ ಜನರು ಎರಡು ಡೋಸ್‌ಗಳನ್ನು ಪಡೆದಿದ್ದು, ಇದೀಗ ಬೂಸ್ಟರ್ ಲಸಿಕೆ ಪಡೆಯಲು ಮುಂದಾಗಿದ್ದಾರೆ. ರೂಪಾಂತರಿ BF.7 ಆತಂಕ ಹಿನ್ನೆಲೆ ಮತ್ತೆ ಬೂಸ್ಟರ್ ಡೋಸ್‌ ಪಡೆಯಲು ಜನರು ಮುಂದಾಗಿದ್ದಾರೆ. ಇಷ್ಟು ದಿನ ಕೇವಲ ಶೇ. 21ರಷ್ಟು ಮಂದಿ ಮಾತ್ರ ಬೂಸ್ಟರ್ ಡೋಸ್​ ಪಡೆದಿದ್ದರು. ಇದರಲ್ಲಿ ಅತಿ ಹೆಚ್ಚು ಕೋವಿಶೀಲ್ಡ್ ಲಸಿಕೆ ಪಡೆದಿದ್ದಾರೆ.

ಹೀಗಾಗಿ ಬೂಸ್ಟರ್ ಡೋಸ್‌ನಲ್ಲೂ ಕೋವಿಶೀಲ್ಡ್ ಬೇಕು ಎಂದು ಜನರು ಹೇಳುತ್ತಿದ್ದಾರೆ. ಇದೀಗ ಬೂಸ್ಟರ್ ಲಸಿಕೆ ಹಾಕಿಸಿಕೊಳ್ಳಬೇಕು ರಾಜ್ಯ ಸರ್ಕಾರ ಹೇಳಿದೆ. ಆದರೆ ಸರ್ಕಾರಿ ಆಸ್ಪತ್ರೆಗಳಲ್ಲೇ ಕೋವಿಶಿಲ್ಡ್ ಹಾಗೂ ಕೋರ್ಬಿವ್ಯಾಕ್ಸ್ ಲಸಿಕೆ ಲಭ್ಯವಿಲ್ಲ. ದೇಶಕ್ಕೆ ಮತ್ತೆ ಕೊರೊನಾ(Corona) ಭೀತಿ ಎದುರಾಗಿದೆ, ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ 2 ಕೋಟಿ ಕೋವಿಡ್ ಲಸಿಕೆಯನ್ನು ಉಚಿತವಾಗಿ ನೀಡಲು ಸಿದ್ಧ ಎಂದು ಸೀರಮ್ ಇನ್​ಸ್ಟಿಟ್ಯೂಟ್ ಹೇಳಿದೆ.


Spread the love

By admin