Spread the love

ಸಂಸ್ಥೆಯೊಂದರ ಆಡಳಿತ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರನ್ನು ತಕ್ಷಣದಿಂದಲೇ ಕೆಲಸದಿಂದ ವಜಾ ಮಾಡಿದ ಕಾರಣ, ಅವರಿಗೆ 15 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಅಮೆರಿಕದ ಉದ್ಯೋಗ ನ್ಯಾಯಮಂಡಳಿ ಆದೇಶಿಸಿದೆ.

34ರ ಹರೆಯದ ಚಾರ್ಲೊಟ್ ಲೀಚ್, ಗರ್ಭಿಣಿಯಾಗುತ್ತಿದ್ದಂತೆಯೇ ಆ ವಿಷಯವನ್ನು ತಮ್ಮ ಮ್ಯಾನೇಜರ್‌ಗೆ ತಿಳಿಸಿದ್ದರು.

ಇದು ತಿಳಿಯುತ್ತಲೇ ಆಕೆ ಇನ್ನು ಕೆಲಸಕ್ಕೆ ಯೋಗ್ಯವಲ್ಲ ಎನ್ನುವ ಕಾರಣಕ್ಕೆ ಕೆಲಸದಿಂದ ವಜಾಗೊಳಿಸಲಾಗಿತ್ತು. ಇದರಿಂದ ಆಕೆ ಬಹಳ ನೊಂದುಕೊಂಡಿದ್ದರು.

ಈ ಹಿಂದೆ ಚಾರ್ಲೊಟ್‌ ಇದೇ ಕಾರಣಕ್ಕೆ ಹಲವು ಬಾರಿ ಗರ್ಭಪಾತ ಮಾಡಿಸಿಕೊಂಡಿದ್ದರು. ತಾನು ಮಗುವನ್ನು ಹೆತ್ತ ಬಳಿಕವೂ ಚೆನ್ನಾಗಿಯೇ ಕೆಲಸ ಮಾಡುವುದಾಗಿ ಹೇಳಿದರೂ ಸಂಸ್ಥೆ ಕೇಳಲಿಲ್ಲ. ಆದ್ದರಿಂದ ಆಕೆ ಸಂಸ್ಥೆ ವಿರುದ್ಧ ಕೋರ್ಟ್‌ಗೆ ಹೋಗಿದ್ದರು.

ಈಕೆ ಒಪ್ಪಂದಕ್ಕೆ ಇನ್ನೂ ಸಹಿ ಹಾಕದ ಕಾರಣ ಆಕೆಗೆ ಯಾವುದೇ ಹೆರಿಗೆ ರಜೆಗೆ ಅರ್ಹತೆ ಇಲ್ಲ ಎಂದು ಸಂಸ್ಥೆ ಹೇಳಿತ್ತು. ಇದನ್ನು ಕೋರ್ಟ್‌ ಮಾನ್ಯ ಮಾಡಲಿಲ್ಲ. ಕೂಡಲೇ ಆಕೆಗೆ 14,885 ಪೌಂಡ್‌ಗಳನ್ನು (ಸುಮಾರು 15 ಲಕ್ಷ ರೂಪಾಯಿ) ಪರಿಹಾರ ನೀಡುವಂತೆ ಕೋರ್ಟ್‌ ಆದೇಶಿಸಿದೆ.


Spread the love

By admin