Spread the love

31 ವರ್ಷ ವಯಸ್ಸಿನ ನವವಿವಾಹಿತ ಮಹಿಳೆ ತನ್ನ ನೆರೆಮನೆಯ ಗದ್ದಲದಿಂದ ರೋಸಿ ಹೋಗಿದ್ದಳು. ಈಕೆ ಮೃದುವಾಗಿ ಮಾತನಾಡುವಂತೆ ನೆರೆ ಮನೆಯವರಿಗೆ ಕೇಳಿಕೊಂಡರೂ ಪ್ರಯೋಜನ ಆಗಲಿಲ್ಲ. ತನ್ನ ಪತಿಯೊಂದಿಗೆ ಈ ಮಹಿಳೆ ಮೇಲಿನ ಮಹಡಿಯಲ್ಲಿ ವಾಸಿಸುತ್ತಿದ್ದಾಳೆ. ಪಕ್ಕದ ಮನೆಯವರು ಪದೇ ಪದೇ ಪಾರ್ಟಿ ಮಾಡುವ ಹಿನ್ನೆಲೆಯಲ್ಲಿ ಇದು ಈ ಯುವ ದಂಪತಿಗೆ ಕಿರಿಕಿರಿ ಆಗುತ್ತಿತ್ತು.

 

ಎಷ್ಟೇ ಹೇಳಿದರೂ ನೆರೆಮನೆಯವರು ಕೇಳದ ಹಿನ್ನೆಲೆಯಲ್ಲಿ ಹೊಸದೊಂದು ಪ್ಲ್ಯಾನ್‌ ಮಾಡಿದಳು ಈ ಮಹಿಳೆ. ಅದಕ್ಕಾಗಿ ಒಂದು ನೋಟಿಸ್‌ ಅನ್ನು ಗಲಾಟೆ ಮಾಡುತ್ತಿರುವ ಮನೆಯವರ ಬಾಗಿಲಿಸಿ ಅಂಟಿಸಿದರು.

ಅದರಲ್ಲಿ ನೀವು ಮನೆಯಲ್ಲಿ ಮಾತನಾಡಿದ್ದೆಲ್ಲಾ ನಮ್ಮ ಮನೆಗೆ ಕೇಳಿಸುತ್ತದೆ. ಆದ್ದರಿಂದ ನಿಮ್ಮ ಸಂಭಾಷಣೆಗಳು ಖಾಸಗಿಯಾಗಿ ಉಳಿಯುತ್ತಿಲ್ಲ, ಈ ಹಿನ್ನೆಲೆಯಲ್ಲಿ ಸ್ವಲ್ಪ ತಗ್ಗಿಸಿದ ದನಿಯಲ್ಲಿ ಮಾತನಾಡಿ” ಎಂದು ನೋಟಿಸ್‌ನಲ್ಲಿ ಹೇಳಿದಳು.

ಸ್ವಲ್ಪ ದಿನ ಇದು ವರ್ಕ್‌ಔಟ್‌ ಆಯಿತು. ಆದರೆ ಮತ್ತದೇ ಗದ್ದಲ ಮುಂದುವರೆಯಿತು. ಇದರಿಂದ ಮತ್ತೆ ಮಹಿಳೆ ರೋಸಿಹೋದಳು. ಈ ಸಲ ಆಕೆ ಗದ್ದಲ ಮಾಡುವ ಮನೆಯವರು ಖಾಸಗಿಯಾಗಿ ಏನೇನು ಮಾತನಾಡುತ್ತಾರೆ ಎನ್ನುವ ಟಿಪ್ಪಣೆಯನ್ನು ಮಾಡಿಕೊಂಡು ಅದನ್ನು ಬರೆದು ಬಾಗಿಲಿಗೆ ಅಂಟಿಸಿದಳು. ಇದನ್ನು ನೋಡಿ ಹೌಹಾರಿದ ನೆರೆಮನೆಯವರು ಅಂದಿನಿಂದ ಗದ್ದಲ ಮಾಡುವುದನ್ನು ನಿಲ್ಲಿಸಿದ್ದಾರೆ ಎಂದು ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ.


Spread the love

By admin