Spread the love

ಬೆಂಗಳೂರು: ಬೆಂಗಳೂರಿನಲ್ಲಿ ಒಲಾ ವಿರುದ್ಧ ಬಳಕೆದಾರರ ಆಕ್ರೋಶ ಹೆಚ್ಚಾಗಿದೆ. ಕ್ಯಾಬ್ ಬುಕಿಂಗ್ ಮಾಡಿದ ಬಳಿಕ ಡ್ರೈವರ್ಸ್ ಕ್ಯಾನ್ಸಲ್ ಮಾಡುವ ಪರಿಪಾಠ ಹೆಚ್ಚಾಗಿದ್ದು, ಈ ಕುರಿತು ಸಾಮಾಜಿಕಲ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ದೂರು, ಆಕ್ರೋಶ ಹೆಚ್ಚಾಗುತ್ತಿದ್ದಂತೆ ಒಲಾ ಸಿಇಒ ಭವಿಷ್ ಅಗರ್ವಾಲ್ ಸ್ಪಷ್ಟನೆ ನೀಡಿದ್ದಾರೆ.

ಇಷ್ಟೇ ಅಲ್ಲ ಒಲಾ ಡ್ರೈವರ್ ರೈಡಿಂಗ್ ಕ್ಯಾನ್ಸಲ್ ಕುರಿತು ಶೀಘ್ರದಲ್ಲೇ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದ್ದಾರೆ. ಇದಕ್ಕೆ ಮುಖ್ಯ ಕಾರಣ ಡ್ರಾಪ್ ಲೊಕೇಶನ್ ಎಂದು ಭವಿಷ್ ಅಗರ್ವಾಲ್ ಹೇಳಿದ್ದಾರೆ.

ಡ್ರೈವರ್ ದಿಢೀರ್ ರೈಡ್ ಕ್ಯಾನ್ಸಲ್ ಮಾಡುವ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಈ ಕುರಿತು ಪಾರ್ಟ್ನರ್ ಕ್ಯಾಬ್ ಹಾಗೂ ಚಾಲಕರ ಜೊತೆ ಸಭೆ ನಡೆಸಿ ಕ್ಯಾನ್ಸಲ್ ಸಮಸ್ಯೆ ಪರಿಹರಿಸುವುದಾಗಿ ಹೇಳಿದ್ದಾರೆ. ಕ್ಯಾಬ್ ಚಾಲಕರು ರೈಡ್ ಸ್ವೀಕರಿಸಿ ಬಳಿಕ ಕ್ಯಾನ್ಸಲ್ ಮಾಡುತ್ತಿರುವ ಕುರಿತು ಹಲವು ದೂರುಗಳು ದಾಖಲಾಗಿದೆ. ಪ್ರಮುಖವಾಗಿ ಗ್ರಾಹಕರು ತಲುಪಬೇಕಾದ ಸ್ಥಳದ ಕುರಿತ ಮಾಹಿತಿ ತಿಳಿದ ಬೆನ್ನಲ್ಲೇ ಕ್ಯಾನ್ಸಲ್ ಮಾಡುತ್ತಿದ್ದಾರೆ. ಇನ್ನು ಹಣ ಪಾವತಿ ವಿಧಾನ ಚೆಕ್ ಮಾಡಿ ಡ್ರೈವರ್ಸ್ ಕ್ಯಾನ್ಸಲ್ ಮಾಡುತ್ತಿದ್ದಾರೆ ಎಂದು ಭವಿಷ್ ಅಗರ್ವಾಲ್ ಹೇಳಿದ್ದಾರೆ.


Spread the love

By admin