ಬೆಂಗಳೂರು: ಕೊಳೆತ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆಯಾಗಿರುವ ಘಟನೆ ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣ ಬಳಿ ನಡೆದಿದೆ. ರೈಲು ನಿಲ್ದಾಣದ ಬಾಕ್ಸ್ ವೊಂದರಲ್ಲಿ ಶವ ಪತ್ತೆಯಾಗಿದ್ದು, ಬಾಕ್ಸ್ ಮೇಲೆ ಬಟ್ಟೆಗಳನ್ನು ಸುತ್ತಿ ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದಾರೆ.ಇನ್ನೂ ಕೊಲೆ ಮಾಡಿ ಶವವನ್ನ ಬಾಕ್ಸ್ ನಲ್ಲಿ ಇಟ್ಟಿರುವ ಶಂಕೆ ವ್ಯಕ್ತವಾಗಿದ್ದು,
ಇಂದು ಶವ ಕೊಳೆತು ವಾಸನೆ ಬಂದ ಹಿನ್ನಲೆಯಲ್ಲಿ ಪರಿಶೀಲಿಸಿದಾಗ ಮೃತದೇಹ ಪತ್ತೆಯಾಗಿದೆ. ವಿಷಯ ತಿಳಿದ ಕೂಡಲೇ ರೈಲ್ವೆ ಪೊಲೀಸರು ಮತ್ತು ಶ್ವಾನದಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರೈಲು ನಿಲ್ದಾಣದ ಸಿಸಿಟಿವಿಗಳನ್ನ ಪೊಲೀಸರು, ಪರಿಶೀಲನೆ ನಡೆಸಿದ್ದು, ಮೃತ ಮಹಿಳೆ ಗುರುತು ಪತ್ತೆ ಹಚ್ಚುತ್ತಿದ್ದಾರೆ.