Spread the love

ಬೆಂಗಳೂರು: ಮುಂದಿನ ತಿಂಗಳಿನಿಂದ ಪಡಿತರದಾರರಿಗೆ 4 ಕೆಜಿ ಅಕ್ಕಿ ಕಡಿತ ಮಾಡಲಾಗುತ್ತದೆ. ಪಡಿತರದಾರರಿಗೆ 10 ಕೆಜಿ ಬದಲು 6 ಕೆಜಿ ಮಾತ್ರ ಅಕ್ಕಿ ವಿತರಣೆ ಮಾಡಲಾಗುತ್ತದೆ ಎಂದು ಆಹಾರ, ನಾಗರಿಕ ಸರಬರಾಜು & ಗ್ರಾಹಕರ ವ್ಯವಹಾರ ಇಲಾಖೆಯ ಜಂಟಿ ನಿರ್ದೇಶಕ ವಿಜಯ್ ಕುಮಾರ್ ತಿಳಿಸಿದ್ದಾರೆ.

ಕಳೆದ 2 ವರ್ಷಗಳಿಂದ 10 ಕೆಜಿ ಉಚಿತ ಅಕ್ಕಿ ನೀಡಲಾಗುತ್ತಿತ್ತು. ಮುಂದಿನ ತಿಂಗಳಿಂದ 6 ಕೆ.ಜಿ ಅಕ್ಕಿ ವಿತರಣೆ ಮಾಡಲಾಗುತ್ತದೆ. ರಾಜ್ಯದಲ್ಲಿ ಕೇಂದ್ರದ 1.2 ಕೋಟಿ BPL ಕಾರ್ಡ್​ದಾರರಿದ್ದಾರೆ. ಈಗ ಕೇಂದ್ರವೇ ನೇರವಾಗಿ 5 ಕೆಜಿ ಅಕ್ಕಿ ಉಚಿತವಾಗಿ ನೀಡುತ್ತಿದೆ. ರಾಜ್ಯ ಸರ್ಕಾರ 1 ಕೆಜಿ ಅಕ್ಕಿ ಖರೀದಿಸಿ ಉಚಿತವಾಗಿ ನೀಡಲಿದೆ. ಈ ಹಿಂದೆ ರಾಜ್ಯ ಸರ್ಕಾರ ಕೇಂದ್ರದಿಂದ ಅಕ್ಕಿ ಖರೀದಿಸುತ್ತಿತ್ತು. ಪ್ರತಿ ಕೆಜಿಗೆ 3 ರೂ. ಕೊಟ್ಟು ಖರೀದಿಸಿ ಉಚಿತವಾಗಿ ನೀಡುತ್ತಿತ್ತು ಎಂದರು.

ಕೊವಿಡ್‌ ಹಿನ್ನೆಲೆ 2020-21ರ ಮೇ ತಿಂಗಳಿಂದ 2022ರ ಡಿ.31ರವರೆಗೆ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ ಯೋನೆಯಡಿ ಪ್ರತಿ ಫಲಾನುಭವಿಗಳಿಗೆ ತಲಾ 5 ಕೆಜಿ ಅಕ್ಕಿಯನ್ನು ವಿತರಿಸುತ್ತಿತ್ತು. ಇದರೊಂದಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅನ್ವಯ ರಾಜ್ಯ ಸರ್ಕಾರವೂ ಪ್ರತಿ ಫಲಾನುಭವಿಗೆ ತಲಾ 5 ಕೆಜಿ ಅಕ್ಕಿ ಹಂಚಿಕೆ ಮಾಡುತ್ತಿತ್ತು. ಈಗ ಹತ್ತು ಕೆಜಿ ಅಕ್ಕಿ ವಿತರಣೆ ಬಂದ್ ಮಾಡಿ ಕೇವಲ 6 ಕೆಜಿ ಅಕ್ಕಿ ನೀಡಲಾಗುತ್ತೆ. ಕೇಂದ್ರ ಸರ್ಕಾರವೇ 5 ಕೆಜಿ ಉಚಿತವಾಗಿ ಅಕ್ಕಿ ವಿತರಣೆ ಮಾಡಲಿದ್ದು ರಾಜ್ಯ ಸರ್ಕಾರ ಒಂದು ಕೆಜಿ ಅಕ್ಕಿ, ಖರೀದಿ ಮಾಡಿ ಉಚಿವಾಗಿ ವಿತರಣೆ ಮಾಡಲಿದೆ ಎಂದು ಇಲಾಖೆಯ ಜಂಟಿ ನಿರ್ದೇಶಕ ವಿಜಯ್ ಕುಮಾರ್ ತಿಳಿಸಿದ್ದಾರೆ.


Spread the love

By admin