Spread the love

ಟಾಲಿವುಡ್ ಪ್ರಿನ್ಸ್ ನಟ ಮಹೇಶ್​ ಬಾಬು ಅವರಿಗೆ ದೇಶಾದ್ಯಂತ ಅಭಿಮಾನಿಗಳಿದ್ದಾರೆ. ಅನೇಕ ಸೂಪರ್​ ಹಿಟ್​ ಸಿನಿಮಾಗಳನ್ನು ನೀಡಿದ ಅವರು ತಮ್ಮದೇ ಆದ ಶೈಲಿಯಲ್ಲಿ ಕೆಲಸ ಮಾಡುತ್ತಾರೆ. ಫ್ಯಾಮಿಲಿಗೆ ಹೆಚ್ಚು ಸಮಯ ನೀಡುತ್ತಾರೆ. ಒಂದು ಚಿತ್ರದಿಂದ ಮತ್ತೊಂದು ಚಿತ್ರಕ್ಕೆ ಹೆಚ್ಚು ಗ್ಯಾಪ್​ ನೀಡುತ್ತಿದ್ದಾರೆ.

ಆದರೆ ಇದು ಅವರ ಅಭಿಮಾನಿಗಳಿಗೆ ಇಷ್ಟವಾಗುತ್ತಿಲ್ಲ.

ಮಹೇಶ್ ಬಾಬು ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳಲ್ಲಿ ಬ್ಯುಸಿ ಆಗಬೇಕು ಮತ್ತು ಜಾಸ್ತಿ ಗ್ಯಾಪ್​ ಕೊಡಬಾರದು ಎಂಬುದು ಅಭಿಮಾನಿಗಳ ಬಯಕೆ. ಅದನ್ನು ಫ್ಯಾನ್ಸ್​ ನೇರವಾಗಿ ಹೇಳಿದ್ದಾರೆ. ಅಷ್ಟೇ ಅಲ್ಲದೇ, ‘ತಮಿಳು ನಟ ದಳಪತಿ ವಿಜಯ್​ ಅವರನ್ನು ನೋಡಿ ಮಹೇಶ್​ ಬಾಬು ಕಲಿಯಬೇಕು’ ಎಂದು ಕೆಲವರು ಕಮೆಂಟ್​ ಮಾಡಿದ್ದಾರೆ. ಇದು ಸೋಶಿಯಲ್​ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.

ದಳಪತಿ ವಿಜಯ್​ ‘ವಾರಿಸು’ ಸಿನಿಮಾದ ಬಿಡುಗಡೆಗಾಗಿ ಕಾದಿದ್ದಾರೆ. ಈ ಚಿತ್ರ ಜನವರಿ 12ರಂದು ರಿಲೀಸ್​ ಆಗಲಿದೆ. ಆ ಚಿತ್ರದ ಪ್ರಮೋಷನ್​ ಕೆಲಸಗಳು ನಡೆಯುತ್ತಿರುವಾಗಲೇ ವಿಜಯ್​ ಅವರು ತಮ್ಮ ಹೊಸ ಚಿತ್ರದಲ್ಲಿ ಬ್ಯುಸಿ ಆಗಿದ್ದಾರೆ. ಖ್ಯಾತ ನಿರ್ದೇಶಕ ಲೋಕೇಶ್​ ಕನಗರಾಜ್​ ಜೊತೆ ಅವರು ಹೊಸ ಸಿನಿಮಾ ಮಾಡುತ್ತಿದ್ದಾರೆ. ಕಳೆದ ಸೋಮವಾರವಷ್ಟೇ ಆ ಸಿನಿಮಾ ಸೆಟ್ಟೇರಿದೆ.

ಮಹೇಶ್​ ಬಾಬು ಕೂಡ ವಿಜಯ್ ಅಂತೆ ಬೇಗನೆ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಳ್ಳಬೇಕು ಎಂಬುದು ಅಭಿಮಾನಿಗಳ ಬಯಕೆ. ಅವರು ನಟಿಸಿದ ‘ಸರ್ಕಾರು ವಾರಿ ಪಾಟ’ ಚಿತ್ರ ಕಳೆದ ವರ್ಷ ಮೇ ತಿಂಗಳಲ್ಲಿ ಬಿಡುಗಡೆ ಆಯಿತು. ಅಂದಿನಿಂದ ಇಂದಿನ ತನಕ ಅವರು ಹೊಸ ಚಿತ್ರದ ಶೂಟಿಂಗ್​ ಆರಂಭಿಸಿಲ್ಲ. ಇದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.


Spread the love

By admin