Spread the love

ಬಾಲಿವುಡ್​ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ಇತ್ತೀಚೆಗೆ ಸಾಕಷ್ಟು ಸುದ್ದಿ ಆಗುತ್ತಿದ್ದಾರೆ. ಬಾಲಿವುಡ್​ನಲ್ಲಿ ಅವರು ಕೆಲವರನ್ನು ಎದುರು ಹಾಕಿಕೊಂಡಿದ್ದಾರೆ. ಸಿದ್ಧಾಂತದ ಕಾರಣದಿಂದ ಒಂದು ವರ್ಗದ ನೆಟ್ಟಿಗರು ಅವರನ್ನು ವಿರೋಧಿಸುತ್ತಾರೆ. ಬಲಪಂಥೀಯ ವಿಚಾರಗಳನ್ನು ಅವರು ಹೆಚ್ಚು ಪ್ರತಿಪಾದಿಸುತ್ತಾರೆ ಎಂಬುದು ಹಲವರು ಅಭಿಪ್ರಾಯ.

ಇದರ ನಡುವೆ ಕಾಂಟ್ರವರ್ಸಿ ನಿರ್ದೇಶಕ ಕಮ್​ ಸ್ವಯಂ ಘೋಷಿತ ವಿಮರ್ಶಕ ಕಮಲ್ ಆರ್ ಖಾನ್ ಅಗ್ನಿಹೋತ್ರಿಯ ಮೇಲೆ ಆರೋಪ ಮಾಡಿದ್ದಾರೆ.

ಶಾರುಖ್​ ಖಾನ್​ ಅಭಿನಯದ ‘ಪಠಾಣ್​’ ಚಿತ್ರದ ವಿವಾದದಿಂದ ವಿವೇಕ್​ ಅಗ್ನಿಹೋತ್ರಿ ಪ್ರಚಾರ ಪಡೆಯುತ್ತಿದ್ದಾರೆ ಎಂದು ಕಮಾಲ್​ ಆರ್​. ಖಾನ್​ ಆರೋಪಿಸಿದ್ದಾರೆ. ಈ ಬಗ್ಗೆ ವಿವೇಕ್​ ಅಗ್ನಿಹೋತ್ರಿ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾ ಸೂಪರ್​ ಹಿಟ್​ ಆದ ಬಳಿಕ ವಿವೇಕ್​ ಅಗ್ನಿಹೋತ್ರಿ ಜನಪ್ರಿಯತೆ ಹೆಚ್ಚಿತು. ಈಗ ಅವರು ‘ದಿ ವ್ಯಾಕ್ಸಿನ್​ ವಾರ್​’ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಆ ಚಿತ್ರದ ಶೂಟಿಂಗ್​ ಇತ್ತೀಚೆಗಷ್ಟೇ ಶುರುವಾಗಿದೆ. ಆ ಸಿನಿಮಾದ ಕೆಲಸಗಳ ಜೊತೆಗೆ ಕೆಲವು ವಿವಾದಗಳ ಬಗ್ಗೆಯೂ ತಮ್ಮ ಅನಿಸಿಕೆ ಹಂಚಿಕೊಳ್ಳಲು ವಿವೇಕ್​ ಅಗ್ನಿಹೋತ್ರಿ ಸಮಯ ಮಾಡಿಕೊಳ್ಳುತ್ತಿದ್ದಾರೆ.


Spread the love

By admin