ಹಾವೇರಿ: ಸಮಾಜಕ್ಕಾಗಿ ಸೇವೆ ಮಾಡುವವರನ್ನು ಗುರುತಿಸಿ ಸನ್ಮಾನಿಸಬೇಕು. ಈ ರೀತಿ ಸನ್ಮಾನಿಸುವುದರಿಂದ ಸಮಾಜಸೇವಕರಿಗೆ ಹುರುಪು ಹೆಚ್ಚಾಗುತ್ತದೆ ಎಂದು ನ್ಯಾ. ಸಂತೋಷ ಹೆಗ್ಡೆ ಹೇಳಿದ್ದಾರೆ.
ಹಾವೇರಿಯಲ್ಲಿ ನಡೆಯುತ್ತಿರುವ 86ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ಮಾತನಾಡಿ, ದುರಾಸೆಗೆ ಮದ್ದಿಲ್ಲ.
ಹಿರಿಯರು ತೃಪ್ತಿ ಎನ್ನುವ ಮದ್ದು ಕಂಡುಹಿಡಿದಿದ್ದರು. ಆ ತೃಪ್ತಿ ಎಂಬ ಮದ್ದು ಇದ್ದರೆ ದುರಾಸೆ ದೂರವಾಗುತ್ತದೆ ಎಂದರು.
ಎಲ್ಲರಲ್ಲೂ ಆಕಾಂಕ್ಷೆ ಇರಬೇಕು. ಜಾಸ್ತಿ ಓದಬೇಕು, ಸಾಧಿಸಬೇಕು, ಶ್ರೀಮಂತನಾಗುವ ಆಕಾಂಕ್ಷೆ ಇರಬೇಕು. ಆದರೆ, ಮತ್ತೊಬ್ಬರ ಜೇಬಿಗೆ ಕೈ ಹಾಕಬಾರದು ಎಂದು ಸಲಹೆ ನೀಡಿದ ಅವರು, ಮಾನವೀಯತೆ ಎನ್ನುವುದು ಹಿರಿಯರು ಕೊಟ್ಟ ಮೌಲ್ಯವಾಗಿದೆ ಎಂದು ಹೇಳಿದ್ದಾರೆ.