Spread the love

ಬೆಂಗಳೂರು: ಬೆಂಗಳೂರಿನಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಆಟೋಗೆ ಇನ್ನೋವಾ ಕಾರ್ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಬೆಂಗಳೂರಿನ ಕೆಆರ್ ಪುರಂ ಬಳಿ ತಡರಾತ್ರಿ ಘಟನೆ ನಡೆದಿದೆ. ಆಟೋದಲ್ಲಿದ್ದ ಐವರಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆಟೋ ಚಾಲಕನ ಪತ್ನಿ ತಾಸೀನಾ(24), ಸೋದರಿ ಫಾಸಿಲಾ(38) ಮೃತಪಟ್ಟವರು ಎಂದು ಹೇಳಲಾಗಿದೆ.

ಆಟೋ ಚಾಲಕ ಖಾಲೀದ್, ಇಬ್ಬರು ಮಕ್ಕಳಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ನಿಮಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಆರ್ ಪುರಂ ನಿಂದ ಚನ್ನಸಂದ್ರಕ್ಕೆ ಹೋಗುತ್ತಿದ್ದಾಗ ಘಟನೆ ನಡೆದಿದೆ. ಆಟೋ ಚಾಲಕ ಖಾಲಿದ್, ಪತ್ನಿ ತಾಸೀನಾ, ಇಬ್ಬರು ಮಕ್ಕಳು, ಖಾಲಿದ್ ಸೋದರಿ ಫಾಸಿಲಾ ಆಟೋದಲ್ಲಿ ಪ್ರಯಾಣಿಸುತ್ತಿದ್ದರು. ಅಪಘಾತದ ಬಳಿಕ ಕಾರ್ ಸಮೇತ ಚಾಲಕ ಪರರಿಯಾಗಿದ್ದಾನೆ. ಕೆಆರ್ ಪುರಂ ಠಾಣೆಯಲ್ಲಿ ಹಿಟ್ ಅಂಡ್ ರನ್ ಕೇಸ್ ದಾಖಲಾಗಿದೆ.


Spread the love

By admin