Spread the love

ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ ಹೈದರಾಬಾದ್‌ನಲ್ಲಿ ತಮ್ಮ ವೆಬ್ ಸರಣಿ ‘ಇಂಡಿಯನ್ ಪೊಲೀಸ್ ಫೋರ್ಸ್’ ಚಿತ್ರೀಕರಣದ ವೇಳೆ ಗಾಯಗೊಂಡಿದ್ದಾರೆ.

ನಗರದ ಹೊರವಲಯದಲ್ಲಿರುವ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಣದ ವೇಳೆ ನಿರ್ದೇಶಕ ರೋಹಿತ್ ಶೆಟ್ಟಿ ಕೈಗೆ ಗಾಯವಾಗಿದೆ.

 

ಅವರನ್ನು ಕಾಮಿನೇನಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಣ್ಣ ಶಸ್ತ್ರಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಮೂಲಗಳ ಪ್ರಕಾರ, ಕಾರ್ ಚೇಸ್ ಸೀಕ್ವೆನ್ಸ್ ಚಿತ್ರೀಕರಣದ ವೇಳೆ ಗಾಯಗೊಂಡ ರೋಹಿತ್ ಶೆಟ್ಟಿ ಅವರನ್ನ ತಕ್ಷಣ ಚಿತ್ರ ತಂಡ ಕಾಮಿನೇನಿ ಆಸ್ಪತ್ರೆಗೆ ಕರೆತಂದಿತ್ತು. ಮಹತ್ವಾಕಾಂಕ್ಷೆಯ ಕಾಪ್ ವೆಬ್ ಶೋ ಶೂಟಿಂಗ್ ಸದ್ಯ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆಯುತ್ತಿದೆ. ಪ್ರಮುಖ ಶೆಡ್ಯೂಲ್‌ಗಾಗಿ ಅದ್ಧೂರಿ ಸೆಟ್‌ ಹಾಕಲಾಗಿದೆ ಎನ್ನಲಾಗಿದೆ.

ಚಿತ್ರೀಕರಣವು ಕಾರ್ ಚೇಸ್ ಸೀಕ್ವೆನ್ಸ್ ಮತ್ತು ಇತರ ಹೈ-ಆಕ್ಟೇನ್ ಆಕ್ಷನ್ ಮತ್ತು ಸ್ಟಂಟ್ ದೃಶ್ಯಗಳನ್ನು ಒಳಗೊಂಡಿತ್ತು.


Spread the love

By admin